ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಹಾಗೂ ಪ್ರಧಾನಮಂತ್ರಿ ನರೇಂದ್ರ ಮೋದಿ
ನವದೆಹಲಿ: ದುಬಾರಿ ನೋಟಿ ಮೇಲೆ ನಿಷೇಧ ಹೇರುವ ಮೂಲಕ ದಿಟ್ಟ ಹೆಜ್ಜೆ ಇಟ್ಟಿರುವ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನಿರ್ಧಾರವನ್ನು ಭಾರತ ತಂಡದ ನಾಯಕ ವಿರಾಟ್ ಕೊಹ್ಲಿಯವರು ಬುಧವಾರ ಕೊಂಡಾಡಿದ್ದಾರೆ.
ನೋಟು ನಿಷೇಧ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಅವರು, ನನ್ನ ಪ್ರಕಾರ ಇದೊಂದು ಭಾರತೀಯ ಇತಿಹಾಸದಲ್ಲಿಯೇ ದೊಡ್ಡ ಹೆಜ್ಜೆಯಾಗಿದೆ. ನಿರ್ಧಾರದಿಂದ ನಾನು ಬಹಳ ಆಕರ್ಷಿತಕ್ಕೊಳಗಾಗಿದ್ದೇನೆ. ಪ್ರಸ್ತುದ ದೇಶದಲ್ಲಿ ನಡೆಯುತ್ತಿರುವುದನ್ನು ನೋಡುತ್ತಿದ್ದರೆ ನಂಬುವುದಕ್ಕೆ ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದಾರೆ.
ಇದೇ ವೇಳೆ ತಮಗಾದ ಅನುಭವವೊಂದನ್ನು ಜನತೆಯೊಂದಿಗೆ ಹೆಂಚಿಕೊಂಡಿರುವ ಅವರು, ರಾಜ್ ಕೋಟ್ ನಲ್ಲಿರುವ ಹೋಟೆಲ್ ವೊಂದಕ್ಕೆ ಹೋಗಿದ್ದೆ. ಬಿಲ್ ಕಟ್ಟುವ ಸಮಯದಲ್ಲಿ ಅರಿವಿಲ್ಲದೆಯೇ ಹಳೆಯ ನೋಟನ್ನು ಕೊಟ್ಟಿದ್ದೆ. ನಂತರ ಹಳೆಯ ನೋಟಿಗೆ ಬೆಲೆಯಿಲ್ಲ ಎಂಬುದು ತಿಳಿಯಿತು. ನಾನು ಯಾವಾಗಲೂ ಜನರಿಗೆ ನೋಟಿನ ಮೇಲೆ ಸಹಿ ಮಾಡಿ ಕೊಡುತ್ತಿದ್ದೆ. ಇದೀಗ ಆ ನೋಟ್ ಗಳಿಗೆ ಬೆಲೆಯಿಲ್ಲದಂತಾಗಿದೆ ಎಂದು ಹೇಳಿಕೊಂಡಿದ್ದಾರೆ.