ಇಂಗ್ಲೆಂಡ್ 
ಕ್ರಿಕೆಟ್

2ನೇ ಟೆಸ್ಟ್: 255 ರನ್ಗಳಿಗೆ ಇಂಗ್ಲೆಂಡ್ ಆಲೌಟ್, ಭಾರತಕ್ಕೆ 200 ರನ್ ಮುನ್ನಡೆ

ಟೀಂ ಇಂಡಿಯಾ ದ್ವಿತೀಯ ಟೆಸ್ಟ್ ನ ಮೊದಲ ಇನ್ನಿಂಗ್ಸ್ ನಲ್ಲಿ ಇಂಗ್ಲೆಂಡ್ ತಂಡವನ್ನು 255 ರನ್ ಗಳಿಗೆ ಆಲೌಟ್ ಮಾಡಿದ್ದು, 200 ರನ್ ಗಳ ಮುನ್ನಡೆ ಪಡೆದಿದೆ...

ವಿಶಾಖಪಟ್ಟಣಂ: ಟೀಂ ಇಂಡಿಯಾ ದ್ವಿತೀಯ ಟೆಸ್ಟ್ ನ ಮೊದಲ ಇನ್ನಿಂಗ್ಸ್ ನಲ್ಲಿ ಇಂಗ್ಲೆಂಡ್ ತಂಡವನ್ನು 255 ರನ್ ಗಳಿಗೆ ಆಲೌಟ್ ಮಾಡಿದ್ದು, 200 ರನ್ ಗಳ ಮುನ್ನಡೆ ಪಡೆದಿದೆ. 
ವಿಶಾಖಪಟ್ಟಣನ ಡಾ.ವೈ.ಎಸ್ ರಾಜಶೇಕರ ರೆಡ್ಡಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ನ ಪ್ರಥಮ ಇನ್ನಿಂಗ್ಸ್ ನಲ್ಲಿ ಇಂಗ್ಲೆಂಡ್ 255 ರನ್ ಗಳಿಗೆ ಆಲೌಟ್ ಆಗಿದೆ. ಇಂಗ್ಲೆಂಡ್ ಪರ ಕೂಕ್ 2, ಹಮೀದ್ 13, ರೂಟ್ 53, ಡಕ್ಕೇಟ್ 5 ಮೊಹಮ್ಮದ್ ಅಲಿ 1, ಸ್ಟೋಕ್ಸ್ 70, ಬೆರ್ ಸ್ಟೋ 53, ಅನ್ಸಾರಿ 32, ಬೊರ್ಡ್ 13 ರನ್ ಗಳಿಸಿದ್ದಾರೆ. 
ಭಾರತ ಪರ ಆರ್ ಅಶ್ವಿನ್ 5, ಮೊಹಮ್ಮದ್ ಶಮಿ ಹಾಗೂ ಯಾದವ್ 1 ವಿಕೆಟ್ ಪಡೆದಿದ್ದಾರೆ. 
ಟೀಂ ಇಂಡಿಯಾ ಮೊದಲ ಇನ್ನಿಂಗ್ಸ್ ನಲ್ಲಿ 455 ರನ್ ಗಳಿಗೆ ಆಲೌಟ್ ಆಗಿತ್ತು. ಭಾರತ ಪರ ಮುರಳಿ ವಿಜಯ್ 20, ಕೆಎಲ್ ರಾಹುಲ್ 0, ಚೇತೇಶ್ವರ್ ಪೂಜಾರ 119, ವಿರಾಟ್ ಕೊಹ್ಲಿ 167, ಅಜಿಂಕ್ಯಾ ರಹಾನೆ 23, ಆರ್ ಅಶ್ವಿನ್ 58, ವೃದ್ದಿಮಾನ್ ಸಾಹಾ 3, ರವೀಂದ್ರ ಜಡೇಜಾ 0, ಜೋಗಿಂದರ್ ಯಾದವ್ 35, ಉಮೇಶ್ ಯಾದವ್ 13 ಹಾಗೂ ಮೊಹಮ್ಮದ್ ಶಮಿ ಅಜೇಯ 7 ರನ್ ಗಳಿಸಿದ್ದಾರೆ. 
ಇಂಗ್ಲೆಂಡ್ ಪರ ಆ್ಯಂಡರ್ಸನ್, ಮೊಹಮ್ಮದ್ ಅಲಿ ತಲಾ 3 ವಿಕೆಟ್, ರಶೀದ್ 2, ಬ್ರಾಡ್, ಮತ್ತು ಸ್ಟೋಕ್ ತಲಾ 1 ವಿಕೆಟ್ ಪಡೆದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

KPSC ನೇಮಕಾತಿ ಹಗರಣ: ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್, ಸದಸ್ಯೆ ಗೀತಾ 13 ದಿನ ED ಕಸ್ಟಡಿಗೆ

ರಾಜ್ಯದಲ್ಲಿ ಶೇ. 90ರಷ್ಟು ಬೆಳೆ ಹಾನಿ: ಪರಿಸ್ಥಿತಿ ಗಂಭೀರ - DCM ಪರಮೇಶ್ವರ

'ಸತ್ತವರಿಂದಲೂ ವೋಟಿಂಗ್, SIR ಉಪಯೋಗಗಳ ಕುರಿತು ಚೆನ್ನಿತ್ತಲಾರನ್ನು ಕೇಳಿ': ರಾಹುಲ್ ಗಾಂಧಿಗೆ ಸುರೇಶ್ ಗೋಪಿ

'ನನ್ನ ವಿರುದ್ಧ 100 ಎಫ್‌ಐಆರ್‌ ದಾಖಲಿಸಿ ಹೆದರಲ್ಲ, ಪ್ರತಿಯೊಂದೂ ನನಗೆ ಪದಕ': ರಾಹುಲ್ ಗಾಂಧಿ