ವಿಶಾಖಪಟ್ಟಣಂ: ಇಂಗ್ಲೆಂಡ್ ವಿರುದ್ಧದ ದ್ವಿತೀಯ ಟೆಸ್ಟ್ ನ ಮೊದಲ ಇನ್ನಿಂಗ್ಸ್ ನಲ್ಲಿ ಇಂಗ್ಲೆಂಡ್ ದಿಢೀರ್ ಪತನ ಕಂಡಿದೆ. ಕೇವಲ 103 ರನ್ ಗಳಿಗೆ ಪ್ರಮುಖ 5 ವಿಕೆಟ್ ಗಳನ್ನು ಇಂಗ್ಲೆಂಡ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ. ಇನ್ನು ಎರಡನೇ ದಿನದಾಟದ ಮುಕ್ತಾಯದ ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಭಾರತದ ಸ್ಟಾರ್ ಸ್ಪಿನ್ ಮಾಂತ್ರಿಕ ಆರ್ ಅಶ್ವಿನ್ ಮಾಧ್ಯಮಗಳ ವಿರುದ್ಧ ಹರಿಹಾಯ್ದಿದ್ದಾರೆ.
ಭಾರತದಲ್ಲಿನ ಸ್ಪಿನ್ ಪಿಚ್ ಗಳ ಕುರಿತು ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಸಿಟ್ಟಾದ ಅಶ್ವಿನ್. ಯಾಕೆ ಇಂತಹ ಅವಹೇಳನ ಮಾಡುವ ಪ್ರಶ್ನೆಗಳನ್ನು ಪದೇ ಪದೇ ಕೇಳುತ್ತಾರೋ ಗೊತ್ತಾಗುತ್ತಿಲ್ಲ ಎಂದರು.
ಭಾರತೀಯ ಪಿಚ್ ಗಳು ಚನ್ನಾಗಿಯೇ ಇವೆ ಎಂದ ಅವರು ಪತ್ರಕರ್ತರು ಇದೇ ರೀತಿಯ ಪ್ರಶ್ನೆಗಳನ್ನು ಕೇಳುತ್ತಿದ್ದರೆ ಮುಂದೊಂದು ದಿನ ನಿಮ್ಮ ಪ್ರಶ್ನೆಗಳಿಗೆ ಉತ್ತರಿಸುವುದನ್ನು ನಿಲ್ಲುತ್ತೇನೆ ಎಂದರು.
ವಿಶಾಖಪಟ್ಟಣನ ಡಾ.ವೈ.ಎಸ್ ರಾಜಶೇಕರ ರೆಡ್ಡಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ನ ಪ್ರಥಮ ಇನ್ನಿಂಗ್ಸ್ ನಲ್ಲಿ ಟೀಂ ಇಂಡಿಯಾ 455 ರನ್ ಗಳಿಗೆ ಆಲೌಟ್ ಆಗಿತ್ತು. ಬಳಿಕ ಪ್ರಥಮ ಇನ್ನಿಂಗ್ಸ್ ಆರಂಭಿಸಿದ್ದ ಇಂಗ್ಲೆಂಡ್ ದಿನದಾಟದ ಮುಕ್ತಾಯಕ್ಕೆ ಪ್ರಮುಖ 5 ವಿಕೆಟ್ ಕಳೆದುಕೊಂಡಿದೆ. ಇಂಗ್ಲೆಂಡ್ ಪರ ಕೂಕ್ 2, ಹಮೀದ್ 13, ರೂಟ್ 53, ಡಕ್ಕೇಟ್ 5 ಮೊಹಮ್ಮದ್ ಅಲಿ 1 ರನ್ ಗಳಿಸಿ ಔಟಾಗಿದ್ದಾರೆ. ಸ್ಟೋಕ್ಸ್ ಅಜೇಯ 12 ಹಾಗೂ ಬೈರ್ಸ್ಟೋ 12 ರನ್ ಗಳಿಸಿ ಕ್ರೀಸ್ ನಲ್ಲಿದ್ದಾರೆ. ಭಾರತ ಪರ ಆರ್ ಅಶ್ವಿನ್ 2, ಮೊಹಮ್ಮದ್ ಶಮಿ ಹಾಗೂ ಯಾದವ್ 1 ವಿಕೆಟ್ ಪಡೆದಿದ್ದಾರೆ.