ಕ್ರಿಕೆಟ್

'ಮುಯ್ಯಿಗೆ ಮುಯ್ಯಿ' ಟ್ವೀಟರ್ನಲ್ಲಿ ಜೇಮ್ಸ್ ಆಂಡರ್ಸನ್ ಕಾಲೆಳೆದ ವಿರೇಂದ್ರ ಸೆಹ್ವಾಗ್

Vishwanath S
ಒಂದೇ ಟೆಸ್ಟ್ ಪಂದ್ಯದ ಎರಡು ಇನ್ನಿಂಗ್ಸ್ ನಲ್ಲಿ ಮೊದಲ ಎಸೆತದಲ್ಲೇ ಔಟ್ ಆಗುವ ಆಟಗಾರರಿಗೆ ಕಿಂಗ್ ಪೇರ್ ಅಥವಾ ಗೋಲ್ಡನ್ ಪೇರ್ ಎಂದು ಕರೆಯಲಾಗುತ್ತದೆ. ಇದೀಗ ಇಂತಹ ಕಿಂಗ್ ಪೇರ್ ಅವಮಾನ ಎದುರಿಸಿದ್ದ ಇಂಗ್ಲೆಂಡ್ ಆಟಗಾರ ಜೇಮ್ಸ್ ಆಂಡರ್ ಸನ್ ರನ್ನು ಟೀಂ ಇಂಡಿಯಾದ ಮಾಜಿ ಬ್ಯಾಟ್ಸ್ ಮನ್ ವೀರೇಂದ್ರ ಸೆಹ್ವಾಗ್ ಟ್ವೀಟರ್ ನಲ್ಲಿ ಕಾಲೆಳೆದಿದ್ದಾರೆ. 
2011ರಲ್ಲಿ ಆಂಡರ್ ಸನ್ ನನ್ನನ್ನು ಕಿಂಗ್ ಪೇರ್ ದಾಖಲೆಗೆ ಸಿಲುಕಿಸಿ ನನಗೆ ಆರ್ಯಭಟ ಗೌರವ ನೀಡಿದ್ದು ಇದೀಗ ಅವರೇ ಕಿಂಗ್ ಪೇರ್ ಆಗಿದ್ದಾರೆ ಎಂದು ವೀರು ಹೇಳಿದ್ದಾರೆ. 2011ರ ಬರ್ಮಿಂಗ್ ಹ್ಯಾಂ ಟೆಸ್ಟ್ ನಲ್ಲಿ ಸೆಹ್ವಾಗ್ ಕಿಂಗ್ ಪೇರ್ ಅಪಮಾನ ಎದುರಿಸಿದ್ದರು. 
ವಿಶಾಖಪಟ್ಟಣಂನಲ್ಲಿ ನಡೆದ ಇಂಗ್ಲೆಂಡ್ ಮತ್ತು ಟೀಂ ಇಂಡಿಯಾ ನಡುವಿನ ದ್ವಿತೀಯ ಟೆಸ್ಟ್ ಪಂದ್ಯ ಮೊದಲ ಹಾಗೂ ದ್ವಿತೀಯ ಇನ್ನಿಂಗ್ಸ್ ನಲ್ಲಿ ಜೇಮ್ಸ್ ಆಂಡರ್ಸನ್ ಮೊದಲ ಎಸೆತದಲ್ಲಿ ಔಟ್ ಆಗಿದ್ದು ಇದೀಗ ಅಪಮಾನಕ್ಕೆ ಗುರಿಯಾಗಿದ್ದಾರೆ. 
SCROLL FOR NEXT