ಪಾಲಂ(ದೆಹಲಿ): 8 ಬಾರಿ ರಣಜಿ ಟ್ರೋಫಿ ಚಾಂಪಿಯನ್ ಆಗಿರುವ ಕರ್ನಾಟಕ ತಂಡ ಪ್ರಸಕ್ತ ಟೂರ್ನಿಯ ಒಡಿಶಾ ಪಂದ್ಯದ ವಿರುದ್ಧ ಸೋಲಬೇಕಿದ್ದ ಪಂದ್ಯವನ್ನು ಡ್ರಾ ಮಾಡಿಕೊಂಡು ಅಜೇಯ ಓಟ ಪ್ರಾರಂಭಿಸಿದೆ.
ದೆಹಲಿಯ ಮಾಡೆಲ್ ಸ್ಪೋರ್ಟ್ ಕಾಂಪ್ಲೆಕ್ಸ್ ಮೈದಾನದಲ್ಲಿ ಗುರುವಾರ ಮುಕ್ತಾಯಗೊಂಡ ಪಂದ್ಯದಲ್ಲಿ ಉಭಯ ತಂಡಗಳ ಸಮ್ಮತಿ ಮೇರೆಗೆ ಪಂದ್ಯವನ್ನು ಡ್ರಾ ಎಂದು ಘೋಷಿಸಲಾಯಿತು.
ಕರ್ನಾಟಕ ಮೊದಲ ಇನ್ನಿಂಗ್ಸ್ ನಲ್ಲಿ 179 ಅಲ್ಪ ಮೊತ್ತಕ್ಕೆ ಆಲೌಟ್ ಆಗಿತ್ತು. ನಂತರ ಇನ್ನಿಂಗ್ಸ್ ಪ್ರಾರಂಭಿಸಿದ್ದ ಒಡಿಶಾ 342 ರನ್ ಗಳಿಸಿ 163 ರನ್ ಮುನ್ನಡೆ ಪಡೆದಿತ್ತು. ದ್ವಿತೀಯ ಇನ್ನಿಂಗ್ಸ್ ನಲ್ಲಿ 393 ರನ್ ಗಳಿಗೆ ಸರ್ವಪತನ ಕಂಡಿತು. ಇದರೊಂದಿಗೆ 231 ರನ್ ಸುಲಭ ಗುರಿ ಪಡೆದ ಒಡಿಶಾ ವಿಕೆಟ್ ನಷ್ಟವಿಲ್ಲದೆ 63 ರನ್ ಗಳಿಸಿತು. ಅಲ್ಲಿಗೆ ಪಂದ್ಯ ಡ್ರಾ ಆಗಿ ಕರ್ನಾಟಕ ಅಜೇಯ ಓಟ ಮುಂದುವರೆಸಿದೆ.
ಕರ್ನಾಟಕ ಪರ ವಿಕೆಟ್ ಕೀಪರ್ ಸಿಎಂ ಗೌತಮ್ 95 ಹಾಗೂ ಶ್ರೇಯಸ್ ಗೋಪಾಲ್ 77 ರನ್ ಗಳ ಸಹಾಯದಿಂದ ದ್ವಿತೀಯ ಇನ್ನಿಂಗ್ಸ್ ನಲ್ಲಿ ಉತ್ತಮ ಕಲೆ ಹಾಕಲು ಸಾಧ್ಯವಾಗಿದ್ದು ಪಂದ್ಯ ಡ್ರಾನಲ್ಲಿ ಅಂತ್ಯವಾಯಿತು.