ಮೊಹಾಲಿ: ಮೊಹಾಲಿಯಲ್ಲಿ ನಡೆದ ಮೂರನೇ ಟೆಸ್ಟ್ ಪಂದ್ಯದಲ್ಲಿ ಭಾರತ ಇಂಗ್ಲೆಂಡ್ ವಿರುದ್ಧ ಸರಳ ಜಯ ದಾಖಲಿಸಿದೆ. ಇಂಗ್ಲೆಂಡ್ ತಂಡ ನೀಡಿದ್ದ 103 ರನ್ ಗಳ ಗುರಿಯನ್ನು ಕೇವಲ 20.2 ಓವರ್ ಗಳಲ್ಲಿ ತಲುಪಿದ್ದು ಗೆಲುವು ದಾಖಲಿಸಿದೆ.
2 ವಿಕೆಟ್ ಕಳೆದುಕೊಂಡ ಭಾರತ ತಂಡದ ಪರ ಪಾರ್ಥಿವ್ ಪಟೇಲ್ 67 ರನ್ ಗಳನ್ನು ಗಳಿಸಿದರೆ, ಚೇತೇಶ್ವರ್ ಪೂಜಾರ 25 ರನ್, ನಾಯಕ ವಿರಾಟ್ ಕೋಹ್ಲಿ 6 ರನ್ ಗಳಿಸಿದ್ದಾರೆ. ಆರಂಭಿಕ ಆಟಗಾರ ಮುರಳಿ ವಿಜಯ್ ಶೂನ್ಯಕ್ಕೆ ಔಟ್ ಆಗಿದ್ದಾರೆ. ಕೇವಲ 236ರನ್ ಗಳಿಗೆ ಆಲ್ ಔಟ್ ಆದ ಇಂಗ್ಲೆಂಡ್ ತಂಡ, ಕೊಹ್ಲಿ ಪಡೆಗೆ ಗೆಲ್ಲಲು 103 ರನ್ ಗಳ ಸಾಧಾರಣ ಗುರಿ ನೀಡಿತ್ತು. ಇಂಗ್ಲೆಂಡ್ ಪರ ಕ್ರಿಸ್ ವೋಕ್ಸ್, ಆದಿಲ್ ರಷೀದ್ ತಲಾ ಒಂದು ವಿಕೆಟ್ ಪಡೆದಿದ್ದಾರೆ.