ಕ್ರಿಕೆಟ್

ಕೋರ್ಟ್ ಗೆ ಎಂಎಸ್ ಧೋನಿ ತಪ್ಪು ಮಾಹಿತಿ!

Vishwanath S

ನವದೆಹಲಿ: ಟೀಂ ಇಂಡಿಯಾದ ಸೀಮಿತ ಓವರ್ ಗಳ ಕ್ರಿಕೆಟ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ನ್ಯಾಯಾಲಯಕ್ಕೆ ಉದ್ದೇಶಪೂರ್ವಕವಾಗಿ ತಪ್ಪು ಮಾಹಿತಿ ನೀಡುತ್ತಿದ್ದಾರೆ ಎಂದು ಮ್ಯಾಕ್ಸ್ ಮೊಬಿಲಿಂಕ್ ಅರ್ಜಿ ಸಲ್ಲಿಸಿದೆ.

ಮ್ಯಾಕ್ಸ್ ಮೊಬಿಲಿಂಕ್ ಪ್ರೈವೇಟ್ ಲಿಮಿಟೆಡ್ ಕಂಪನಿ ಧೋನಿಯೊಂದಿಗೆ ಜಾಹಿರಾತು ಒಪ್ಪಂದ ಮಾಡಿಕೊಂಡಿತ್ತು. ಈ ಒಪ್ಪಂದ 2012ರಲ್ಲೇ ಮುಗಿದಿದ್ದರು ಧೋನಿ ಅವರು ನ್ಯಾಯಾಲಯಕ್ಕೆ ತಪ್ಪು ಮಾಹಿತಿ ನೀಡುತ್ತಿದ್ದಾರೆ ಎಂದು ಸಂಸ್ಥೆ ಆರೋಪಿಸಿದೆ. ಇದಕ್ಕೆ ಪ್ರತಿಕ್ರಿಯಿಸಲು ಕಾಲಾವಕಾಶವನ್ನು ಧೋನಿ ಪರ ವಕೀಲರು ತೆಗೆದುಕೊಂಡಿದ್ದಾರೆ.

2012ರ ನಂತರ ಧೋನಿ ಹೆಸರಿನ ಉತ್ಪನ್ನಗಳು ಅಂತರ್ಜಾಲದಲ್ಲಾಗಲೀ ನಮ್ಮ ಸ್ಟಾಕ್ ನಲ್ಲಾಗಲೀ ಇಲ್ಲ ಎಂದು ಮೊಬಿಲಿಂಕ್ ಹೇಳಿದೆ.

ಇನ್ನು 2014ರ ನವೆಂಬರ್ ತಿಂಗಳಲ್ಲಿ ಧೋನಿ ಪರ ವಾದಿಸಿದ್ದ ರಿತಿ ಸ್ಪೋರ್ಟ್ಸ್ 2012ರಲ್ಲೇ ಮೊಬಿಲಿಂಕ್ ನೊಂದಿಗೆ ಒಪ್ಪಂದ ಮುಗಿದಿದ್ದರೂ ಅದು ಹಣ ನೀಡದೇ ಧೋನಿ ಹೆಸರನ್ನು ಬಳಸಿಕೊಳ್ಳುತ್ತಿದೆ ಎಂದು ಅರ್ಜಿ ಸಲ್ಲಿಸಿತ್ತು.

SCROLL FOR NEXT