ಕೋಲ್ಕತ್ತಾ: ಅನಾರೋಗ್ಯದ ನಿಮಿತ್ತ 14 ತಿಂಗಳ ಮಗು ಐಸಿಯುನಲ್ಲಿ ದಾಖಲಾಗಿದ್ದರು ಕೋಲ್ಕತ್ತಾದ ಈಡನ್‌ಗಾರ್ಡ್‌ನಲ್ಲಿ ನಡೆದ ಎರಡನೇ ಟೆಸ್ಟ್‌ನಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ಭಾರತ 178 ರನ್‌ಗಳಿಂದ ಜಯ ಸಾಧಿಸಲು ಕಾರಣರಾದವರು ಟೀಂ ಇಂಡಿಯಾ ಬೌಲರ್ ಮೊಹಮದ್ ಶಮಿ.
ಹೌದು, ತಮ್ಮ 14 ತಿಂಗಳ ಮಗು ಆಹಿರಾ ತೀವ್ರ ಜ್ವರ ಹಾಗೂ ಉಸಿರಾಟದ ತೊಂದರೆಯಿಂದಾಗಿ ಸ್ಥಳೀಯ ಆಸ್ಪತ್ರೆಯ ಐಸಿಯುನಲ್ಲಿ ದಾಖಲಾಗಿತ್ತು. ಕೋಲ್ಕತ್ತಾದ ಈಡನ್‌ಗಾರ್ಡ್‌ನಲ್ಲಿ ಎರಡನೇ ಟೆಸ್ಟ್‌ನಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ಭಾರತ 178 ರನ್‌ಗಳಿಂದ ಜಯ ಸಾಧಿಸಿತ್ತು. ಈ ಪಂದ್ಯದಲ್ಲಿ ಶಮಿ 6 ವಿಕೆಟ್ ಕಬಳಿಸುವುದರ ಮೂಲಕ ಭಾರತದ ಗೆಲುವಿಗೆ ಕಾರಣರಾಗಿದ್ದರು.
ಈ ಮ್ಯಾಚ್ ಮುನ್ನಾ ದಿನ ತಮ್ಮ ಮಗಳನ್ನು ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಗುವಿನ ಆರೋಗ್ಯದಲ್ಲಿ ಏರುಪೇರುಗೊಂಡಿದ್ದರಿಂದ ಐಸಿಯುಗೆ ವರ್ಗಾಯಿಸಲಾಗಿತ್ತು. ದಿನದ ಪಂದ್ಯದ ನಂತರ ಶಮಿ ತಮ್ಮ ಮಗಳನ್ನು ಭೇಟಿ ಮಾಡಲು ಹೋಗುತ್ತಿದ್ದರು.
ಮಗು ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದ್ದು, ಈಗ ವೈದ್ಯರು ಮಗುವನ್ನು ಡಿಸ್ಚಾರ್ಜ್ ಮಾಡಿ ಮನೆಗೆ ಕಳುಹಿಸಿದ್ದಾರೆ. ಆಸ್ಪತ್ರೆಯಲ್ಲಿ ಮಗುವನ್ನು ನೋಡಿಕೊಂಡು ವಾಪಸ್ ಬಂದ ನಂತರ ಕ್ಯಾಪ್ಟನ್ ನನಗೆ ಸ್ಫೂರ್ತಿಯ ಮಾತುಗಳನ್ನು ಹೇಳುತ್ತಿದ್ದರು. ತಂಡದ ಇತರ ಸದಸ್ಯರು ನನಗೆ ಧೈರ್ಯ ತುಂಬುತ್ತಿದ್ದರು. ಹೀಗಾಗಿ ಎಲ್ಲರಿಗೂ ನನ್ನ ಧನ್ಯವಾದಗಳು ಎಂದು ಶಮಿ ಹೇಳಿದ್ದಾರೆ.