ಕ್ರಿಕೆಟ್

ಬ್ಯಾಟಿಂಗ್ ಮಾಡುವುದನ್ನು ತುಂಬಾ ಇಷ್ಟಪಡುವ ಸಚಿನ್ ಫೀಲ್ಡಿಂಗ್ ಬಗ್ಗೆ ಹೇಳಿದ್ದೇನು?

Shilpa D

ನವದೆಹಲಿ: ತಮ್ಮ 22 ವರ್ಷಗಳಲ್ಲಿ ಸುದೀರ್ಘ ಕಾಲದ ಕ್ರಿಕೆಟ್ ಜೀವನದಲ್ಲಿ ಸುಮಾರು 30 ಸಾವಿರಕ್ಕೂ ಹೆಚ್ಚು ರನ್ ಗಳಿಸಿರುವ ಸಚಿನ್ ತೆಂಡೂಲ್ಕರ್ ಗೆ ಬ್ಯಾಟಿಂಗ್ ಬಗ್ಗೆ ಅಪಾರ ಪ್ರೀತಿ. ಆದರೆ ಫೀಲ್ಡಿಂಗ್ ಮಾತ್ರ ಅವರ ಪಾಲಿಗೆ ಕಿರುಕುಳವಂತೆ.

ದೆಹಲಿಯಲ್ಲಿ ಆಯೋಜಿಸಿದ್ದ ಮ್ಯಾರಥಾನ್ ನಲ್ಲಿ ಖಾಸಗಿ ಪತ್ರಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾಸ್ಟರ್ ಬ್ಲಾಸ್ಟರ್ ಫೀಲ್ಡಿಂಗ್ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ದೈಹಿಕವಾಗಿ ನಾನು ಫಿಟ್ ಆಗಿದ್ದೆ. ಆದರೂ ನನಗೆ ಫೀಲ್ಡಿಂಗ್ ಮಾಡುವುದು ದೊಡ್ಡ ಟಾರ್ಚರ್ ಆಗಿತ್ತು. ಎಂದು ಹೇಳಿದ್ದಾರೆ.

ಏಕದಿನ ಸರಣಿಗಳಲ್ಲಿ  ಭಾರತದ ಎರಡನೇ ಯಶಸ್ವಿ ಫೀಲ್ಡರ್ ಆಗಿದ್ದ ಸಚಿನ್ ಸುಮಾರು 115 ಕ್ಯಾಚ್ ಹಿಡಿದಿದ್ದಾರೆ. ತಾವು ಉತ್ತಮ ದೈಹಿಕ ಸಾಮರ್ಥ್ಯ ಹೊಂದಿರುವುದುರಿಂದ ವಿಕೆಟ್ ಗಳ ನಡುವೆ ಓಡಿ ಹೆಚ್ಚು ರನ್ ಗಳಿಸುವುದು ಸಾಧ್ಯವಾಯಿತು ಎಂದು ಅವರು ತಿಳಿಸಿದ್ದಾರೆ.

ಕ್ರಿಕೆಟ್ ನಂತ ತಂಡದ ಆಟಕ್ಕೆ ವಯಕ್ತಿಕ ತರಬೇತಿ ಅತ್ಯಗತ್ಯ ಎಂದು ಹೇಳಿದ್ದಾರೆ. ಇಡೀ ವಿಶ್ವದಲ್ಲೇ ಭಾರತ ತಂಡಅತಿ ಉತ್ತಮ ಎಂದು ಸಚಿನ್ ಅಭಿಪ್ರಾಯ ಪಟ್ಟಿದ್ದಾರೆ.

SCROLL FOR NEXT