ಕ್ರಿಕೆಟ್

3ನೇ ಟೆಸ್ಟ್: ನ್ಯೂಜಿಲೆಂಡ್ ವಿರುದ್ಧ ವಿರಾಟ್ ಕೊಹ್ಲಿ ಆಕರ್ಷಕ ಶತಕ

Lingaraj Badiger
ಇಂದೋರ್: ಮಧ್ಯಪ್ರದೇಶದ ಇಂದೋರ್ ನಲ್ಲಿ ನಡೆಯುತ್ತಿರುವ ನ್ಯೂಜಿಲೆಂಡ್ ವಿರುದ್ಧದ ಮೂರನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಆಕರ್ಷಕ ಶತಕ ಸಿಡಿಸಿದ್ದಾರೆ. ಇದರೊಂದಿಗೆ ಕೊಹ್ಲಿ ಟೆಸ್ಟ್ ಕ್ರಿಕೆಟ್ ನಲ್ಲಿ 13ನೇ ಶತಕ ದಾಖಲಿಸಿದ್ದಾರೆ.
ಈಗಾಗಲೇ ಎರಡು ಪಂದ್ಯಗಳನ್ನು ಗೆಲ್ಲುವ ಮೂಲಕ ಸರಣಿ ಕೈವಶ ಮಾಡಿಕೊಂಡಿರುವ ಟೀಂ ಇಂಡಿಯಾ ಇದೀಗ ವಿರಾಟ್ ಕೊಹ್ಲಿಯ ಶತಕ ಹಾಗೂ ಅಜಿಂಕ್ಯ ರಹಾನೆಯ ಅರ್ಧ ಶತಕದ ನೆರವಿನೊಂದಿಗೆ 85 ಓವರ್ ಗಳ ಅಂತ್ಯಕ್ಕೆ 3 ವಿಕೆಟ್ ನಷ್ಟಕ್ಕೆ 267 ರನ್ ಗಳಿಸಿದೆ. 
ಇಂದೋರ್ ನ ಹೊಲ್ಕರ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ಟಾಸ್ ಗೆದ್ದು ಟೀಂ ಇಂಡಿಯಾ ಬ್ಯಾಟಿಂಗ್ ಮಾಡುತ್ತಿದ್ದು ಪ್ರಥಮ ಇನ್ನಿಂಗ್ಸ್ ನಲ್ಲಿ 3 ವಿಕೆಟ್ ನಷ್ಟಕ್ಕೆ 267 ರನ್ ಗಳಿಸಿದೆ.
ಇನ್ನಿಂಗ್ಸ್ ಆರಂಭಿಸಿದ ಮುರಳಿ ವಿಜಯ್ ಹಾಗೂ ಗೌತಮ್ ಗಂಭೀರ್ ರಿಂದ ಉತ್ತಮ ಆರಂಭದ ಆಟ ಕಾಣಲಿಲ್ಲ. ವಿಜಯ್ 10 ರನ್ ಗಳಿಸಿ ಔಟಾದರೆ, ಗಂಭೀರ್ 29 ರನ್ ಗಳಿಸಿ ಔಟಾದರು. ನಂತರ ಚೇತ್ವೇಶ್ವರ್ ಪೂಜಾರ ನಾಯಕ ವಿರಾಟ್ ಕೊಹ್ಲಿ ಜತೆ ಸೇರಿ ಉತ್ತಮ ಬ್ಯಾಟ್ ಬೀಸಿದರು. 41 ರನ್ ಗಳಿಸಿದ್ದಾಗ ಸ್ಯಾಂಟ್ನರ್ ಬೌಲಿಂಗ್ ನಲ್ಲಿ ಬೋಲ್ಡ್ ಆಗಿ ನಿರ್ಗಮಿಸಿದರು. 
ಸದ್ಯ ಮೈದಾನದಲ್ಲಿ ವಿರಾಟ್ ಕೊಹ್ಲಿ ಅಜೇಯ 56 ರನ್ ಹಾಗೂ ಅಜಿಂಕ್ಯ ರಹಾನೆ 21 ರನ್ ಗಳಿಸಿ ಆಟವಾಡುತ್ತಿದ್ದಾರೆ. ನ್ಯೂಜಿಲೆಂಡ್ ಪರ ಬೋಲ್ಟ್, ಪಟೇಲ್ ಹಾಗೂ ಸ್ಯಾಂಟ್ನರ್ ತಲಾ 1 ವಿಕೆಟ್ ಪಡೆದಿದ್ದಾರೆ.
SCROLL FOR NEXT