ನವದೆಹಲಿ: ಶ್ರೀಲಂಕಾ ವಿರುದ್ಧದ ಟಿ20 ಪಂದ್ಯದಲ್ಲಿ 65 ಎಸೆತಗಳಲ್ಲಿ 145 ರನ್ ಗಳನ್ನು ಸಿಡಿಸಿದ್ದ ಆಸ್ಟ್ರೇಲಿಯಾದ ಗ್ಲೇನ್ ಮ್ಯಾಕ್ಸ್‌ವೇಲ್ ಇದೀಗ ಕೌಂಟಿ ಕ್ರಿಕೆಟ್ ನಲ್ಲಿ ಬೌಂಡರಿಯಲ್ಲಿ ಅದ್ಭುತ ಕ್ಯಾಚ್ ಹಿಡಿಯುವ ಮೂಲಕ ಪ್ರಖ್ಯಾತರಾಗಿದ್ದಾರೆ.
ಪರ್ತ್ ನಲ್ಲಿ ನಡೆಯುತ್ತಿದ್ದ ಮಟಡೋರ್ ಕಪ್ ಟೂರ್ನಿಯಲ್ಲಿ ವಿಕ್ಟೋರಿಯಾ ಬುಶ್ ರೇಂಜರ್ಸ್ ಮತ್ತು ವಾರಿಯರ್ಸ್ ತಂಡಗಳ ನಡುವಿನ ಪಂದ್ಯ ನಡೆದಿತ್ತು. ಈ ವೇಳೆ ವಿಕ್ಟೋರಿಯಾ ಪರ ಆಡುತ್ತಿದ್ದ ಗ್ಲೇನ್ ಮ್ಯಾಕ್ಸ್‌ವೇಲ್ ವಾರಿಯರ್ಸ್ ಬ್ಯಾಟ್ಸ್ ಮನ್ ಸಿಡಿಸಿದ ಚೆಂಡನ್ನು ಬೌಂಡರಿಯಲ್ಲಿ ಹಿಡಿದಿದ್ದಾರೆ. ಆದರೆ ತಾವು ಇನ್ನೇನು ಬೌಂಡರಿಯಲ್ಲಿ ಬಿಳುತ್ತೇನೆ ಎಂದು ತಿಳಿದು ಕೂಡಲೇ ಚೆಂಡನ್ನು ಮತ್ತೊಬ್ಬ ಆಟಗಾರನ ಕಡೆಗೆ ಎಸೆದಿದ್ದು ಆ ಆಟಗಾರ ಚೆಂಡನ್ನು ಹಿಡಿಯುವ ಮೂಲಕ ಬ್ಯಾಟ್ಸ್ ಮನ್ ಔಟಾಗಿದ್ದಾರೆ.
ಇದೀಗ ಗ್ಲೇನ್ ಮ್ಯಾಕ್ಸ್‌ವೇಲ್ ಬೌಂಡರಿಯಲ್ಲಿ ಚೆಂಡನ್ನು ಹಿಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮ್ಯಾಕ್ಸ್ ವೇಲ್ ಚೆಂಡನ್ನು ಹಿಡಿಯದಿದ್ದರೆ ಅದು ಸಿಕ್ಸರ್ ಆಗಲಿತ್ತು.