ಕ್ರಿಕೆಟ್

299 ರನ್ ಗೆ ನ್ಯೂಜಿಲ್ಯಾಂಡ್ ಆಲೌಟ್: 258 ರನ್ ಗಳ ಮುನ್ನಡಯೊಂದಿಗೆ ಭಾರತದ 2 ನೇ ಇನ್ನಿಂಗ್ಸ್ ಆರಂಭ

Srinivas Rao BV

ಇಂದೋರ್: ಭಾರತ- ನ್ಯೂಜಿಲ್ಯಾಂಡ್ ನಡುವೆ ನಡೆಯುತ್ತಿರುವ ಅಂತಿಮ ಟೆಸ್ಟ್ ಪಂದ್ಯದ ಪ್ರಥಮ ಇನ್ನಿಂಗ್ಸ್ ನಲ್ಲಿ ಮುನ್ನಡೆ ಭಾರತ ತಂಡ 258 ರನ್ ಗಳ ಮುನ್ನಡೆ ಸಾಧಿಸಿದೆ.

ನ್ಯೂಲ್ಯಾಂಡ್ ತಂಡ 299 ರನ್ ಗಳಿಗೆ ಸರ್ವಪತನ ಕಂಡಿದ್ದು, ಭಾರತದ ಪರ ಅಶ್ವಿನ್ 6 ವಿಕೆಟ್ ಪಡೆದರೆ ರವೀಂದ್ರ ಜಡೇಜಾ 2 ವಿಕೆಟ್ ಪಡೆದಿದ್ದಾರೆ. ಮೊದಲ ಇನ್ನಿಂಗ್ಸ್ ನಲ್ಲಿ ಭಾರತ ತಂಡ ಮುನ್ನಡೆ ಕಾಯ್ದುಕೊಳ್ಳುವುದರಲ್ಲಿ  ಪ್ರಮುಖ ಪಾತ್ರ ವಹಿಸಿದ ಆರ್ ಅಶ್ವಿನ್, ಎದುರಾಳಿ ತಂಡದ ಪ್ರಾರಂಭಿಕ ಆಟಗಾರ ಟಾಮ್ ಲ್ಯಾಥಮ್ ಅವರ ವಿಕೆಟ್ ಪಡೆದು ನ್ಯೂಜಿಲ್ಯಾಂಡ್ ತಂಡಕ್ಕೆ ಆರಂಭಿಕ ಆಘಾತ ನೀಡಿದರು.

ಊಟದ ವಿರಾಮಕ್ಕೂ ಮುನ್ನವೇ ನ್ಯೂಜಿಲ್ಯಾಂಡ್ ತಂಡದ ಮೂವರು ಬ್ಯಾಟ್ಸ್ ಮ್ಯಾನ್ ಗಳ ವಿಕೆಟ್ ಪಡೆದು ಭಾರತ ತಂಡ ಬೃಹತ್ ಮೊತ್ತದ ಮುನ್ನಡೆ ಸಾಧಿಸುವುದಕ್ಕೆ ನೆರವಾದರು. ಊಟದ ವಿರಾಮದ ವೇಳೆಗೆ 6 ವಿಕೆಟ್ ನಷ್ಟಕ್ಕೆ  216 ರನ್ ಗಳಿಸಿದ್ದ ನ್ಯೂಜಿಲ್ಯಾಂಡ್ ತಂಡ, ಟೀ ವಿರಾಮದ ನಂತರ ಸರ್ವಪತನ ಕಂಡಿತು. ಮೊದಲ ಇನ್ನಿಂಗ್ಸ್ ನಲ್ಲಿ ನ್ಯೂಜಿಲ್ಯಾಂಡ್ ನ ಮಾರ್ಟಿನ್ ಗುಪ್ಟಿಲ್ 72, ಜೇಮ್ಸ್ ನೀಶಾಮ್ 37 ರನ್ ಗಳಿಸಿದರು.

ಆರ್ ಅಶ್ವಿನ್ 65 ರನ್ ಗಳನ್ನು ನೀಡಿ 6 ವಿಕೆಟ್ ಪಡೆದು ಉತ್ತಮ ಪ್ರದರ್ಶನ ನೀಡಿದರು. ಭಾರತ ಮೊದಲ ಇನ್ನಿಂಗ್ಸ್ ನಲ್ಲಿ 5 ವಿಕೆಟ್ ನಷ್ಟಕ್ಕೆ  557 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತ್ತು. ಸೆಕೆಂಡ್ ಇನ್ನಿಂಗ್ಸ್'ನಲ್ಲಿ ಟೀಮ್ ಇಂಡಿಯಾ 18 ರನ್ ಗಳಿಸಿದೆ. ಮುರುಳಿ ವಿಜಯ್(11) ಮತ್ತು ಚೇತೆಶ್ವರ್ ಪೂಜರ್ (1) ವಿಕೆಟ್ ಕಾಯ್ದು ಕೊಂಡಿದ್ದಾರೆ. ಮುರುಳಿ ಜೊತೆ ಇನ್ನಿಂಗ್ಸ್ ಆರಂಭಿಸಿದ್ದ ಗಂಭೀರ್ 6 ರನ್ ಗಳಿಸಿದ್ದ ಸಂದರ್ಭದಲ್ಲಿ ಗಾಯಗೊಂಡು ಪೆವೆಲಿಯನ್ ಸೇರಿದ್ದಾರೆ.

SCROLL FOR NEXT