ಮಧ್ಯಪ್ರದೇಶ ವಿರುದ್ಧದ ರಣಜಿ ಟ್ರೋಫಿ 2ನೇ ಸುತ್ತಿನ ಪಂದ್ಯದ ಮೊದಲ ದಿನ ಪಂಜಾಬ್ ತಂಡದ ಪರ ಸ್ಫೋಟಕ ಬ್ಯಾಟ್ಸ್ ಮನ್ ಯುವರಾಜ್ ಸಿಂಗ್ ಭರ್ಜರಿ ಶತಕ ಸಿಡಿಸಿ ದ್ವಿ ಶತಕದತ್ತ ದಾಪುಗಾಲಿಟ್ಟಿದ್ದಾರೆ.
ಮಧ್ಯಪ್ರದೇಶ ವಿರುದ್ಧ ಮೊದಲ ದಿನ ಪಂಜಾಬ್ 3 ವಿಕೆಟ್ ನಷ್ಟಕ್ಕೆ 347 ರನ್ ಗಳಿಸಿದ್ದು ರಣಜಿಯಲ್ಲಿ ಮೊದಲ ದಿನ ಅತೀ ಹೆಚ್ಚು ರನ್ ಕಳೆ ಹಾಕಿದ ತಂಡವಾಗಿ ಪಂಜಾಬ್ ಹೊರಹೊಮ್ಮಿದೆ. ಇನ್ನು ಪಂಜಾಬ್ ಪರ ಯುವರಾಜ್ ಸಿಂಗ್ ಅಜೇಯ 164 ಹಾಗೂ ಗುರುಕೀರತ್ ಸಿಂಗ್ ಅಜೇಯ 101 ರನ್ ಗಳಿಸಿ ಆಟವಾಡುತ್ತಿದ್ದಾರೆ.
ರಣಜಿಯಲ್ಲಿ 164 ರನ್ ಗಳಿಸುವ ಮೂಲಕ ಯುವರಾಜ್ ಸಿಂಗ್ ಪ್ರಥಮ ದರ್ಜೆ ಇನ್ನಿಂಗ್ಸ್ ನಲ್ಲಿ 14ನೇ ಶತಕ ಸಿಡಿಸಿದ್ದಾರೆ.