ಕ್ರಿಕೆಟ್

ಶಿಕ್ಷಕರ ದಿನಾಚರಣೆಗೆ ವಿರಾಟ್ ಕೊಹ್ಲಿ ತನ್ನ ಗುರುವಿಗೆ ನೀಡಿದ ಕಾಣಿಕೆ ಏನು ಗೊತ್ತಾ?

Lingaraj Badiger
ನವದೆಹಲಿ: ಟೀಂ ಇಂಡಿಯಾ ಟೆಸ್ಟ್ ನಾಯಕ ವಿರಾಟ್ ಕೊಹ್ಲಿ ಅವರು ಶಿಕ್ಷಕರ ದಿನಾಚರಣೆಯಂದು ತನ್ನ ಸಾಧನೆಗೆ ದಾರಿ ತೋರಿದ ಗುರು ರಾಜಕುಮಾರ್ ಶರ್ಮಾ ಅವರಿಗೆ ದುಬಾರಿ ಕಾರೊಂದನ್ನು ಕಾಣಿಕೆಯಾಗಿ ನೀಡಿದ್ದಾರೆ.
ಹಿರಿಯ ಕ್ರೀಡಾ ಪತ್ರಕರ್ತ ವಿಜಯ್ ಲೋಕಪಲ್ಲಿ ಅವರು ಬರೆದಿರುವ 'ಡ್ರಿವೆನ್' ಪುಸ್ತಕದಲ್ಲಿ ರಾಜಕುಮಾರ್ ಶರ್ಮಾ ಅವರು ಈ ಸವಿ ನೆನಪುಗಳನ್ನು ಮೆಲುಕು ಹಾಕಿದ್ದಾರೆ.
 2014, ಸೆಪ್ಟೆಂಬರ್ 5ರಂದು ಬೆಳಗ್ಗೆ ಕಾಲಿಂಗ್ ಬೆಲ್ ಆದಾಗ ರಾಜಕುಮಾರ್ ಶರ್ಮಾ ಬಂದು ನೋಡಿದರೆ ವಿರಾಟ್ ಅವರ ಸಹೋದರ ವಿಕಾಸ್ ಪ್ರತ್ಯಕ್ಷವಾಗಿದ್ದರು. ಕೂಡಲೇ ಅವರು ನಂಬರ್ ಡಯಲ್ ಮಾಡಿ ಮೊಬೈಲ್ ಅನ್ನು ಶರ್ಮಾ ಅವರ ಕೈಗಿತ್ತರು. ಆ ಕಡೆಯಿಂದ 'ಹ್ಯಾಪಿ ಟೀಚರ್ಸ್ ಡೇ ಸರ್' ಎಂದು ವಿರಾಟ್ ಕೊಹ್ಲಿ ಹೇಳಿದರು. ಬಳಿಕ ವಿಕಾಸ್ ರಾಜಕುಮಾರ್ ಶರ್ಮಾ ಅವರ ಕೈಗೆ ಕೀ ಬಂಚ್ ಕೊಟ್ಟು ಹೊರ ನಡೆದರು. 
ಗೊಂದಲಗೊಂಡ ರಾಜಕುಮಾರ್ ಶರ್ಮಾ ಅವರು ಹೊರ ಬಂದು ನೋಡಿದಾಗ, ವಿರಾಟ್ ಅವರು ಉಡುಗೊರೆಯಾಗಿ ನೀಡಿದ್ದ ಸ್ಕೋಡಾ ರ್ಯಾಪಿಡ್ ಕಾರು ಗೇಟ್ ಬಳಿ ನಿಲ್ಲಿಸಲಾಗಿತ್ತು ಎಂದು ಆ ಕ್ಷಣವನ್ನು ವಿವರಿಸಿದ್ದಾಗಿ ಪುಸ್ತಕದಲ್ಲಿ ತಿಳಿಸಲಾಗಿದೆ.
SCROLL FOR NEXT