ವಿರಾಟ್ ಕೊಹ್ಲಿ ಮತ್ತು ಕೆ.ಎಲ್ ರಾಹುಲ್ 
ಕ್ರಿಕೆಟ್

ನಮ್ಮೆಲ್ಲರಿಗೂ ವಿರಾಟ್ ಕೊಹ್ಲಿಯೇ ಸ್ಫೂರ್ತಿ: ಕೆ.ಎಲ್ ರಾಹುಲ್

ಭಾರತ ಕ್ರಿಕೆಟ್ ತಂಡದ ಟೆಸ್ಟ್ ಕ್ಯಾಪ್ಟನ್ ವಿರಾಟ್ ಕೊಹ್ಲಿ ನಮ್ಮೆಲ್ಲರಿಗೂ ಸ್ಫೂರ್ತಿ ಎಂದು ಮತ್ತೊಬ್ಬ ಕ್ರಿಕೆಟಿಗ ಕೆಎಲ್ ರಾಹುಲ್ ಅಭಿಪ್ರಾಯ ಪಟ್ಟಿದ್ದಾರೆ...

ನವದೆಹಲಿ: ಭಾರತ ಕ್ರಿಕೆಟ್ ತಂಡದ ಟೆಸ್ಟ್ ಕ್ಯಾಪ್ಟನ್ ವಿರಾಟ್ ಕೊಹ್ಲಿ ನಮ್ಮೆಲ್ಲರಿಗೂ ಸ್ಫೂರ್ತಿ ಎಂದು ಮತ್ತೊಬ್ಬ ಕ್ರಿಕೆಟಿಗ ಕೆಎಲ್ ರಾಹುಲ್ ಅಭಿಪ್ರಾಯ ಪಟ್ಟಿದ್ದಾರೆ.

ನಾವು ಅದೃಷ್ಟವಂತರು, ನಮಗೆ ಸ್ಫೂರ್ತಿ ನೀಡುವ ಆಟಗಾರರನ್ನು ಬಹಳ ಹಿಂದಕ್ಕೆ ಹೋಗಿ ಹುಡುಕುವ ಅಗತ್ಯವಿಲ್ಲ, ಡ್ರೆಸ್ಸಿಂಗ್ ರೂಂ ನಲ್ಲಿ ನಮ್ಮ ಪಕ್ಕದಲ್ಲೇ ಕೂತು ನಮಗೆ ಚೈತನ್ಯ ತುಂಬುತ್ತಾರೆ ಎಂದು ರಾಹುಲ್ ಹೊಗಳಿದ್ದಾರೆ.

ವಿರಾಟ್ ಕೊಹ್ಲಿಗಿರುವ ಕ್ರಿಕೆಟ್ ಬಗ್ಗೆ ಕಾಳಜಿ, ವೃತ್ತಿ ಧರ್ಮ, ಶಿಸ್ತು, ದೇಹದ ಫಿಟ್ ನೆಸ್, ಡಯಟ್ ಎಲ್ಲವೂ ನಮಗೆ ಪ್ರೇರಣೆಯಾಗಿದೆ ಎಂದು ರಾಹುಲ್ ಹೇಳಿದ್ದಾರೆ.

ಪ್ರಸಕ್ತ ರಾಷ್ಟೀಯ್ ಕ್ರಿಕೆಟ್ ತಂಡದಲ್ಲಿ ಶಿಸ್ತು ಪ್ರಮುಖ ಅಸ್ತ್ರವಾಗಿದೆ. ನೀವು ಡ್ರೆಸ್ಸಿಂಗ್ ರೂಮ ನೊಳಗೆ ಬಂದರೆ ನಿಮಗೆ ತಿಳಿಯುತ್ತದೆ ಎಲ್ಲಾ ಆಟಗಾರರು ಎಷ್ಟರ ಮಟ್ಟಿನ ಶಿಸ್ತು ಪಾಲಿಸುತ್ತಾರೆ ಎಂಬುದು ನಿಮಗೆ ಗೊತ್ತಾಗುತ್ತದೆ ಎಂದು ಹೇಳಿದ್ದಾರೆ.

ನಾನು ಟೆಸ್ಟ್ ಕ್ರಿಕೆಟ್ ಗೆ ಕಾಲಿಟ್ಟಾಗ ನಾನು ಆಟಗಳಲ್ಲಿ ಅಷ್ಟರ ಮಟ್ಟಿಗೆ ಉತ್ತಮ ಪ್ರದರ್ಶನ ತೋರುತ್ತಿರಲಿಲ್ಲ, ಆಗ ನನ್ನ ಸಹಾಯಕ್ಕೆ ಬಂದಿದ್ದು ವಿರಾಟ್ ಕೊಹ್ಲಿ. ಪ್ರತಿ ಹಂತದಲ್ಲೂ ನನ್ನ ತಿದ್ದಿದರು, ನನ್ನಲ್ಲಿ ಆತ್ಮ ವಿಶ್ವಾಸ ಹೆಚ್ಚಿಸಿದರು ಎಂದು ರಾಹುಲ್ ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹಾರ್ಮುಜ್ ತೆರೆಯಲು ಇರಾನ್ ಪರದಾಟ: ಜಲಸಂಧಿ ನಿರ್ಬಂಧಿಸಲು ತಾನೇ ನೆಟ್ಟ ಮೈನ್ಸ್ ಹುಡುಕಲು ವಿಫಲ; ಹಾಗಾದ್ರೆ ಮುಂದೇನು?

ಇಸ್ಲಾಮಾಬಾದ್‌ಗೆ ಆಗಮಿಸಿದ ಜೆಡಿ ವ್ಯಾನ್ಸ್ ವಿಮಾನಕ್ಕೆ ಪಾಕ್‌ನ ಐದು ಎಫ್-16 ಎಸ್ಕಾರ್ಟ್; Video ನೋಡಿ

ಹಾಡಹಗಲೇ, ನಡುರಸ್ತೆಯಲ್ಲಿ ಲಾಯರ್ ಗೆ ಗುಂಡಿಕ್ಕಿ ಹತ್ಯೆ, ಬೈಕ್ ಸ್ಟಾರ್ಟ್ ಆಗದೇ ಹಂತಕರ ಪರದಾಟ! Video

Viral Video: 'ರೀಲ್ಸ್‌ಗಾಗಿ ಮಗುವಿನ ಪ್ರಾಣವನ್ನೇ ಪಣಕ್ಕಿಟ್ಟ ತಂದೆ'; ಬಾಲ್ಕನಿಯಿಂದ ಜಿಗಿದ ಬಾಲಕ, ಅಪ್ಪನ ಹುಚ್ಚಾಟಕ್ಕೆ ತೀವ್ರ ಆಕ್ರೋಶ!

ಮಾತುಕತೆಗೆ ವ್ಯಾನ್ಸ್ ನೇತೃತ್ವದ ಅಮೆರಿಕಾ ತಂಡ ಇಸ್ಲಾಮಾಬಾದ್ ಗೆ ಆಗಮನ; ಲೆಬನಾನ್ ಕದನ ವಿರಾಮ, ಸ್ವತ್ತುಗಳ ಬಿಡುಗಡೆ ಪ್ರಮುಖ ಅಜೆಂಡಾ; Video

SCROLL FOR NEXT