ಕಾನ್ಪುರ: ಚಿಕುನ್ ಗುನ್ಯಾದಿಂದ ಬಳಲುತ್ತಿರುವ ಟೀಂ ಇಂಡಿಯಾದ ವೇಗಿ ಇಶಾಂತ್ ಶರ್ಮ ಅವರು ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ.
ದೆಹಲಿಯಲ್ಲಿ ವ್ಯಾಪಕವಾಗಿ ಹರಡಿರುವುದರಿಂದ ಇಶಾಂತ್ ಅನಾರೋಗ್ಯಕ್ಕೀಡಾಗಿದ್ದಾರೆ. ಸದ್ಯ ಅವರ ಆರೋಗ್ಯದಲ್ಲಿ ಚೇತರಿಕೆ ಕಾಣುತ್ತಿದ್ದರು ಮೊದಲ ಟೆಸ್ಟ್ ನಲ್ಲಿ ಅವರು ಆಡುವುದಿಲ್ಲ ತಂಡದಲ್ಲಿ ಇನ್ನೂ ಮೂವರು ವೇಗಿಗಳು ಸೇರಿ ಒಟ್ಟು 14 ಆಟಗಾರರು ಇರುವುದರಿಂದ ಯಾವುದೇ ಬದಲಿಗರನ್ನು ಕೇಳಿಲ್ಲ ಎಂದು ಭಾರತ ತಂಡದ ಕೋಚ್ ಅನಿಲ್ ಕುಂಬ್ಳೆ ಹೇಳಿದ್ದಾರೆ.
72 ಟೆಸ್ಟ್ ಗಳಲ್ಲಿ 209 ವಿಕೆಟ್ ಕಬಳಿಸಿರುವ ಇಶಾಂತ್ ತಂಡದ ಅಗ್ರ ಬೌಲರ್ ಆಗಿದ್ದು ಕಳೆದ ಕೆಲ ಸರಣಿಗಳ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ.