ಕ್ರಿಕೆಟ್

ವಿಶ್ವದಲ್ಲೇ ಮೊದಲ ಬಾರಿಗೆ ಕೆಪಿಎಲ್ ನಲ್ಲಿ ಪಿಚ್ ಕ್ಯಾಮ್ ಬಳಕೆ

Vishwanath S

ಹುಬ್ಬಳ್ಳಿ: ವಿಶ್ವದಲ್ಲೇ ಮೊದಲ ಬಾರಿಗೆ ಕರ್ನಾಟಕ ಕ್ರಿಕೆಟ್ ಸಂಸ್ಥೆ(ಕೆಎಸ್ಸಿಎ) ಕರ್ನಾಟಕ ಪ್ರಿಮಿಯರ್ ಲೀಗ್(ಕೆಪಿಎಲ್) ಕೂಟದಲ್ಲಿ ಪಿಚ್ ಕ್ಯಾಮ್ ಬಳಕೆ ಮಾಡಲಿದೆ. ಆ ಮೂಲಕ ಕೆಎಸ್ಸಿಎ ನೇರ ಪ್ರಸಾರದಲ್ಲೂ ಮಹತ್ವದ ಬೆಳವಣಿಗೆಯೊಂದಕ್ಕೆ ಕಾರಣವಾಗಿದೆ.

ಕ್ರಿಕೆಟ್ ಇತಿಹಾಸದಲ್ಲಿಯೇ ಹೊಸದೊಂದು ತಾಂತ್ರಿಕ ಪ್ರಯೋಗಕ್ಕೆ ಕೆಪಿಎಲ್ ಟಿವಿ ನೇರ ಪ್ರಸಾರಕ ಇಎಸ್ಪಿಎನ್ ಸೋನಿ ವಾಹಿನಿ ಮುಂದಾಗಿದೆ. 1946ರಲ್ಲಿ ಕ್ರಿಕೆಟ್ ಟೀವಿ ನೇರ ಪ್ರಸಾರ ಆರಂಭವಾದಾಗ ತಾಂತ್ರಿಕ ವಿಷಯಗಳಿಗೆ ಹೆಚ್ಚಿನ ಮನ್ನಣೆ ಇರಲಿಲ್ಲ. ಕ್ಯಾಮೆರಾದಿಂದ ಕೇವಲ ನೇರ ಪ್ರಸಾರ ಆಗುತ್ತಿತ್ತು. ಈ ವೇಳೆ ಅಡಚಣೆಯೂ ಆಗುತ್ತಿತ್ತು. ಆನಂತರ ಕ್ಯಾಮೆರಾ ಬಳೆಕ ತಂತ್ರಜ್ಞಾನದಲ್ಲಿ ಹಲವು ಬದಲಾವಣೆಯಾಯಿತು.

ಮೊದ ಮೊದಲು ಕಪ್ಪು ಬಿಳುಪಿನಲ್ಲಿದ್ದ ನೇರಪ್ರಸಾರ ಆನಂತರ ಬಣ್ಣ ಬಣ್ಣವಾಯಿತು. ಅನಂತರ ಕ್ರಿಕೆಟ್ ನಲ್ಲಿ ಕ್ಯಾಮೆರಾಗಳ ಸಂಖ್ಯೆ ಹೆಚ್ಚಾಯಿತು. ಬಳಿಕ ಸ್ಟಂಪ್ ಕ್ಯಾಮೆರಾ ಬಂತು. ಇದರಿಂದ ಆಟಗಾರ ಸ್ಟಂಪ್, ರನೌಟ್ ಆದ ವೇಳೆ ಔಟಾಗಿದ್ದಾನೆಯೇ ಅಥವಾ ಕ್ರೀಸ್ ನೊಳಗೆ ಇದ್ದಾನೆಯೇ ಎನ್ನುವುದನ್ನು ಪರೀಕ್ಷಿಸಲು ಸಹಾಯವಾಯಿತು. ಹೀಗೆ ಕ್ರಿಕೆಟ್ ಇತಿಹಾಸದಲ್ಲಿ ಕ್ಯಾಮೆರಾಗಳ ಬಳಕೆ ಜಾಸ್ತಿಯಾಗುತ್ತಿದೆ.

SCROLL FOR NEXT