ಕಾನ್ಪುರ: ಐಪಿಎಲ್ ಫ್ರಾಂಚೈಸಿ ತಂಡ ಗುಜರಾತ್ ಲಯನ್ಸ್ ತಂಡದ ಸಹಾಯಕ ಕೋಟ್ ಹಾಗೂ ಹಿರಿಯ ಕ್ರಿಕೆಟಿಗ ಮೊಹಮ್ಮದ್ ಕೈಫ್ ಹೆಣ್ಣು ಮಗುವಿಗೆ ತಂದೆಯಾಗಿದ್ದಾರೆ.
ಮೊಹಮ್ಮದ್ ಕೈಫ್ ಪತ್ನಿ ಪೂಜಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಕೈಫ್ ತನ್ನ ಮಗುವನ್ನು ಎತ್ತಿಕೊಂಡಿರುವ ಚಿತ್ರವನ್ನು ಟ್ವೀಟರ್ ನಲ್ಲಿ ಆಪ್ ಲೋಡ್ ಮಾಡಿದ್ದಾರೆ. ಈ ಮಧ್ಯೆ ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳೆ ಮತ್ತು ಸಚಿನ್ ತೆಂಡೂಲ್ಕರ್ ಕೈಫ್ ದಂಪತಿಗಳಿಗೆ ಶುಭಾಶಯ ಕೋರಿದರು.
ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಬ್ರಾಡ್ ಹಾಡ್ಜ್ ಗುಜರಾತ್ ಲಯನ್ಸ್ ತಂಡವನ್ನು ಮುನ್ನಡೆಸುತ್ತಿದ್ದು ಸದ್ಯ ಅವರಿಗೆ ಸಹಾಯಕ ಕೋಚ್ ಆಗಿ ಕೈಫ್ ಆಯ್ಕೆಯಾಗಿದ್ದಾರೆ.