ಬೆಂಗಳೂರು: ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್) 10ನೇ ಆವೃತ್ತಿಯ ಐದನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಡೆಲ್ಲಿ ಡೇರ್ ಡೆವಿಲ್ಸ್ ತಂಡಗಳು ಮುಖಾಮುಖಿಯಾಗಲಿವೆ.
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಂಜೆ 8 ಗಂಟೆಗೆ ಪಂದ್ಯ ನಡೆಯಲಿದೆ. ಇನ್ನು ಹೈದರಾಬಾದ್ ನಲ್ಲಿ ನಡೆದ ಉದ್ಘಾಟನಾ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಸೋಲು ಕಂಡಿದ್ದ ಆರ್ಸಿಬಿ ಡೆಲ್ಲಿ ವಿರುದ್ಧ ಗೆಲುವ ಮೂಲಕ ಟೂರ್ನಿಯಲ್ಲಿ ಮೊದಲ ಗೆಲುವು ಸಾಧಿಸುವ ಹುಮ್ಮಸ್ಸಿನಲ್ಲಿದೆ.
10ನೇ ಆವೃತ್ತಿಯಲ್ಲಿ ಮೊದಲ ಪಂದ್ಯ ಆಡುತ್ತಿರುವ ಡೆಲ್ಲಿ ಸಹ ಗೆಲುವಿನ ಮೂಲಕ ಟೂರ್ನಿಯಲ್ಲಿ ಶುಭಾರಂಭ ಮಾಡಬೇಕೆಂಬ ಹುಮ್ಮಸ್ಸಿನಲ್ಲಿದೆ. ಇನ್ನು ಈ ಹಿಂದಿನ 9 ಆವೃತ್ತಿಯಲ್ಲಿ ಉಭಯ ತಂಡಗಳು ಮುಖಾಮುಖಿಯಾಗಿದ್ದು ಇದರಲ್ಲಿ ಆರ್ಸಿಬಿ ಹೆಚ್ಚು ಭಾರೀ ಗೆದ್ದು ಬೀಗಿದೆ. 17 ಪಂದ್ಯಗಳ ಪೈಕಿ ಆರ್ಸಿಬಿ 10ರಲ್ಲಿ ಗೆಲುವು ಸಾಧಿಸಿದ್ದರೆ, ಡೆಲ್ಲಿ 6ರಲ್ಲಿ ಗೆಲುವು ಸಾಧಿಸಿದೆ.
ಆರ್ಸಿಬಿ: ಶೇನ್ ವಾಟ್ಸನ್, ಕ್ರಿಸ್ ಗೇಲ್, ಮನ್‌ದೀಪ್ ಸಿಂಗ್, ಟ್ರೆವಿಸ್ ಹೆಡ್, ಕೇದಾರ್ ಜಾಧವ್, ಯುಜವೇಂದ್ರ್ ಚಹಲ್, ಸ್ಟುವರ್ಟ್ ಬಿನ್ನಿ, ಟೈಮಲ್ ಮಿಲ್ಸ್, ಅನಿಕೇತ್ ಚೌಧರಿ, ಶ್ರೀನಾಥ್ ಅರವಿಂದ್, ಅಬು ನಚೀಮ್, ತಬರೆಜ್ ಶಮ್ಸಿ, ಪ್ರವೀಣ್ ದುಬೆ, ಇಕ್ಬಾಲ್ ಅಬ್ದುಲ್ಲಾ, ಅಕ್ಷಯ್ ಕಾರ್ನವಾರ್, ವಿಕ್ರಮ್‌ಜಿತ್ ಮಲಿಕ್, ಪರ್ವೇಜ್ ರಸೂಲ್, ಹರ್ಷಲ್ ಪಟೇಲ್, ಕೇನ್ ರಿಚರ್ಡಸನ್, ಸಚಿನ್ ಬೇಬಿ, ಡೆವಿಡ್ ವೈಸೆ, ವಿರಾಟ್ ಕೊಹ್ಲಿ, ಎಬಿಡಿ ವಿಲಿಯರ್ಸ್.
ಡೆಲ್ಲಿ: ಶ್ಯಾಮ್ ಬಿಲ್ಲಿಂಗ್ಸ್, ಸಂಜು ಸ್ಯಾಮ್ಸಸನ್, ಕೇರಿ ಆ್ಯಂಡರ್ಸನ್, ಕರುಣ್ ನಾಯರ್, ರಿಷಭ್ ಪಂತ್, ಕ್ರೀಸ್ ಮೋರಿಸ್, ಮೊಹಮ್ಮದ್ ಶಮಿ, ಅಮೀತ್ ಮಿಶ್ರಾ, ಜಹೀರ್ ಖಾನ್, ಕಗಿಸೋ ರಬಾಡಾ, ಆದಿತ್ಯಾ ತಾರೆ, ಅಂಕಿತ್ ಭವಾನೆ, ಶಶಾಂಕ್ ಸಿಂಗ್, ಪ್ಯಾಟ್ ಕಮಿನ್ಸ್, ಶಹಬಾದ್ ನದೀಮ್, ಖಲೀಲ್ ಅಹ್ಮದ್, ಎಂ.ಅಶ್ವಿನ್, ಚಮಾನ್ ಮಿಲಿಂದ್, ನವದೀಪ್ ಸೌನಿ, ಪ್ರತ್ಯೂಸ್ ಸಿಂಗ್, ಕಾರ್ಲೋಸ್ ಬ್ರಾಥವೇಟ್, ಎಂಜೆಲೋ ಮ್ಯಾಥ್ಯೂಸ್, ಜಯಂತ್ ಯಾದವ್, ಶ್ರೇಯಸ್ ಅಯ್ಯರ್.