ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯ ಆಕ್ರಮಣಕಾರಿ ಗುಣವನ್ನು ಕಂಡರೇ ಕೆಲವೊಮ್ಮೆ ಭಯವಾಗುತ್ತದೆ ಎಂದು ಭಾರತದ ಸ್ಟಾರ್ ಸ್ಪಿನ್ನರ್ ಆರ್ ಅಶ್ವಿನ್ ಹೇಳಿದ್ದಾರೆ.
ಖಾಸಗಿ ಪತ್ರಿಕೆಗೆ ನೀಡಿದ ಸಂದರ್ಶನದ ವೇಳೆ ಆರ್ ಅಶ್ವಿನ್ ಟೀಂ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ಮತ್ತು ವಿರಾಟ್ ಕೊಹ್ಲಿ ನಾಯಕತ್ವವನ್ನು ಹೋಲಿಕೆ ಮಾಡಿದ್ದು, ಧೋನಿ ಪ್ರಬುದ್ಧ ನಾಯಕ. ಕೊಹ್ಲಿ ಈಗಷ್ಟೇ ಎಲ್ಲಾ ಮೂರು ಮಾದರಿಯ ತಂಡಕ್ಕೆ ನಾಯಕನಾಗಿದ್ದಾರೆ. ಕೊಹ್ಲಿ ಎದುರಾಳಿಯೊಂದಿಗೆ ನೇರ ಮುಖಾಮುಖಿಗಿಳಿಯಲು ಹೆಚ್ಚು ಇಷ್ಟಪಡುತ್ತಾರೆ. ಅವರ ಅತಿಯಾದ ಆಕ್ರಮಣಕಾರಿತನ ಕೆಲವೊಮ್ಮೆ ಕ್ಷೇತ್ರ ರಕ್ಷಣೆಯಲ್ಲಿ ಬದಲಾವಣೆ ಮಾಡಲು ನಾನು ಹೆದ್ದರಿದ್ದೂ ಇದೆ ಎಂದು ಹೇಳಿದ್ದಾರೆ.
ಧೋನಿ ನಾಯಕತ್ವದಲ್ಲಿ ಟೀಂ ಇಂಡಿಯಾ ಹಲವು ಸಾಧನೆಗಳನ್ನು ಮಾಡಿತ್ತು. ಇನ್ನು ಮುಂದೆ ಕೊಹ್ಲಿ ನಾಯಕತ್ವದಲ್ಲಿ ತಂಡ ಮತ್ತೊಂದು ಮಜಲು ಮುಟ್ಟಲಿದೆ ಎಂದು ಅಶ್ವಿನ್ ಹೇಳಿಕೊಂಡಿದ್ದಾರೆ.