ದುಬೈ: ಟೀಂ ಇಂಡಿಯಾದ ಹಿರಿಯ ಸ್ಪಿನ್ನರ್ ಹರ್ಭಜನ್ ಸಿಂಗ್ ಸೇರಿದಂತೆ 8 ಮಂದಿ ಖ್ಯಾತ ಆಟಗಾರರನ್ನು ಮುಂದಿನ ಚಾಂಪಿಯನ್ ಟ್ರೋಫಿಯ ರಾಯಭಾರಿಯನ್ನಾಗಿ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ) ಆಯ್ಕೆ ಮಾಡಿದೆ.
ಇಂಗ್ಲೆಂಡ್ ನಲ್ಲಿ ಜೂನ್ 1ರಿಂದ ಜೂನ್ 18ರವರೆಗೆ ಟೂರ್ನಿ ನಡೆಯಲಿದೆ. ಭಾರತದ ಆಟಗಾರ ಹರ್ಭಜನ್ ಸಿಂಗ್, ಪಾಕಿಸ್ತಾನದ ಶಾಹೀದ್ ಆಫ್ರಿದಿ, ಬಾಂಗ್ಲಾದೇಶದ ಹಬಿಬುಲ್ ಭಷರ್, ಇಂಗ್ಲೆನ್ ನ ಇಯಾನ್ ಬೆಲ್, ನ್ಯೂಜಿಲೆಂಡ್ ನ ಶೇನ್ ಬಾಂಡ್, ಆಸ್ಟ್ರೇಲಿಯಾದ ಮೈಕ್ ಹಸ್ಸಿ, ಶ್ರೀಲಂಕಾದ ಕುಮಾರ ಸಂಗಾಕ್ಕರಮತ್ತು ದಕ್ಷಿಣ ಆಫ್ರಿಕಾದ ಗ್ರೇಮ್ ಸ್ಮಿತ್ ರನ್ನು ಐಸಿಸಿ ರಾಯಭಾರಿಯನ್ನಾಗಿ ಆಯ್ಕೆ ಮಾಡಿದೆ.
ಈ ಎಂಟು ದಿಗ್ಗಜ ಆಟಗಾರರು 1,774 ಏಕದಿನ ಪಂದ್ಯಗಳನ್ನು ಆಡಿದ್ದು 51,906 ರನ್ ಗಳನ್ನು ಸಿಡಿಸಿದ್ದು, ಅವರಿಂದ 48 ಶತಕಗಳು ದಾಖಲಾಗಿವೆ. ಇನ್ನು 838 ವಿಕೆಟ್ ಗಳನ್ನು ಉರುಳಿಸಿದ್ದಾರೆ.
ಓವಲ್ ನಲ್ಲಿ ಚಾಂಪಿಯನ್ ಟ್ರೋಫಿಯ ಮೊದಲ ಪಂದ್ಯ ಇಂಗ್ಲೆಂಡ್ ಮತ್ತು ಬಾಂಗ್ಲಾದೇಶ ವಿರುದ್ಧ ನಡೆಯಲಿದೆ.