ಕ್ರಿಕೆಟ್

ಎಂಎಸ್ ಧೋನಿ ಅವಮಾನಿಸಿದ ಹರ್ಷ್ ಗೋಯೆಂಕಾಗೆ ಪತ್ನಿ ಸಾಕ್ಷಿ ತಿರುಗೇಟು

Vishwanath S
ಪುಣೆ: ಪುಣೆ ಫ್ರಾಂಚೈಸಿ ಮಾಲೀಕನ ಸಹೋದರ ಹರ್ಷ್ ಗೋಯೆಂಕಾ ತಮ್ಮ ಟ್ವೀಟರ್ ಖಾತೆಯಲ್ಲಿ ಮಾಜಿ ನಾಯಕ ಎಂಎಸ್ ಧೋನಿಯನ್ನು ಅವಮಾನಿಸಿದ್ದಕ್ಕೆ ಧೋನಿ ಪತ್ನಿ ಸಾಕ್ಷಿ ತಿರುಗೇಟು ನೀಡಿದ್ದಾರೆ. 
ಐಪಿಎಲ್ ನಿಂದ ನಿಷೇಧಗೊಂಡಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಜೆರ್ಸಿ ಹಾಗೂ ಹೆಲ್ಮೆಟ್ ಧರಿಸಿರುವ ಚಿತ್ರವನ್ನು ಸಾಕ್ಷಿ ತಮ್ಮ ಇನ್ ಸ್ಟಾಗ್ರಾಂ ಖಾತೆಯಲ್ಲಿ ಅಪ್ ಲೋಡ್ ಮಾಡಿದ್ದು ಅದರ ಕೆಳಗೆ ಹಕ್ಕಿ ಜೀವಂತವಿದ್ದಾಗ ಇರುವೆಗಳನ್ನು ತಿನ್ನುತ್ತವೆ. ಅದೇ ಹಕ್ಕಿ ಸತ್ತಾಗ ಅದನ್ನು ಇರುವೆಗಳು ತಿನ್ನುತ್ತವೆ ಎಂದರು ಬರೆದಿದ್ದಾರೆ. 
ಸಮಯ ಮತ್ತು ಸಂದರ್ಭ ಯಾವಾಗ ಬೇಕಾದರೂ ಬದಲಾಗಬಹುದು. ಯಾರನ್ನೂ ಅಪಮೌಲ್ಯಗೊಳಿಸಬೇಡಿ ಮತ್ತು ಯಾರಿಗೂ ನೋವು ಕೊಡಬೇಡಿ. ಇಂದು ನೀವು ಶಕ್ತಿವಂತರಾಗಿರಬಹುದು. ಆದರೆ ಎಲ್ಲದಕ್ಕಿಂತ ಸಮಯ ಅತ್ಯಂತ ಶಕ್ತಿಶಾಲಿ ಎಂದು ಹೇಳುವ ಮೂಲಕ ಹರ್ಷ್ ಗೋಯೆಂಕಾಗೆ ಸಾಕ್ಷಿ ತಿರುಗೇಟು ನೀಡಿದ್ದಾರೆ. 
SCROLL FOR NEXT