ಡೇವಿಡ್ ವಾರ್ನರ್ 
ಕ್ರಿಕೆಟ್

ಅಂಪೈರ್ ಎಡವಟ್ಟು: ಓವರ್ ಮುಕ್ತಾಯದ ಬಳಿಕವೂ ಸ್ಟ್ರೈಕ್ ರೋಟೇಟ್ ಆಗದೆ ವಾರ್ನರ್ ಬ್ಯಾಟಿಂಗ್

ಕ್ರಿಕೆಟ್ ಇತಿಹಾಸದಲ್ಲಿ ಈ ರೀತಿಯ ಘಟನೆ ಈ ಹಿಂದೆ ಎಂದು ನಡೆದಿರಲಿಲ್ಲ. ಇಂತ ಘಟನೆ ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್) 10ನೇ ಆವೃತ್ತಿಯಲ್ಲಿ ನಡೆದಿದೆ...

ಕ್ರಿಕೆಟ್ ಇತಿಹಾಸದಲ್ಲಿ ಈ ರೀತಿಯ ಘಟನೆ ಈ ಹಿಂದೆ ಎಂದು ನಡೆದಿರಲಿಲ್ಲ. ಇಂತ ಘಟನೆ ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್) 10ನೇ ಆವೃತ್ತಿಯಲ್ಲಿ ನಡೆದಿದೆ. 
ಏಪ್ರಿಲ್ 12ರಂದು ಮುಂಬೈನ ವಾಂಖೆಡೆ ಮೈದಾನದಲ್ಲಿ ಮುಂಬೈ ಮತ್ತು ಹೈದರಾಬಾದ್ ನಡುವೆ ಪಂದ್ಯ ನಡೆದಿದ್ದು ಇದರಲ್ಲಿ 6ನೇ ಓವರ್ ನ ಕೊನೆಯ ಎಸೆತವನ್ನು ಆಡಿದ ವಾರ್ನರ್ ಬೌಂಡರಿ ಬಾರಿಸಿದರು. ಬಳಿಕ ಸ್ಟ್ರೈಕ್ ರೋಟೇಟ್ ಆಗದೆ 7ನೇ ಓವರ್ ನ ಮೊದಲ ಎಸೆತವನ್ನು ವಾರ್ನರ್ ಆಡಿ ಬೌಂಡರಿ ಬಾರಿಸಿದರು. ಸ್ಟ್ರೈಕ್ ರೋಟೇಟ್ ಆಗದೆ ಇರುವುದನ್ನು ಏಂಪೈರ್ ಸಹ ಗಮನಿಸಲಿಲ್ಲ. ಮ್ಯಾಚ್ ಹಾಗೆಯೇ ಮುಂದುವರೆಯಿತು. 
ಈ ಪಂದ್ಯದಲ್ಲಿ ಸತತ ಎರಡು ಪಂದ್ಯಗಳನ್ನು ಗೆದ್ದಿದ್ದ ಸನ್ ರೈಸರ್ಸ್ ಹೈದರಾಬಾದ್ ತಂಡ ಮೂರನೇ ಪಂದ್ಯವನ್ನು ಮುಂಬೈ ವಿರುದ್ಧ ಸೋಲು ಕಂಡಿತ್ತು. 
ಕೊನೆಗೆ ಆ ಸಂಗತಿಯನ್ನು ಟ್ವೀಟರ್ ನಲ್ಲಿ ಕ್ರಿಕ್ ಬಜ್ ಹಾಕಿದಾಗ ಗೊತ್ತಾಗಿದೆ. ಇನ್ನು ಇದರ ಬಗ್ಗೆ ಮಾಜಿ ಕ್ರಿಕೆಟಿಗ ಸೆಹ್ವಾಗ್ ಪ್ರತಿಕ್ರಿಯಿಸಿದ್ದು ಐಪಿಎಲ್ ಅಂಪೈರ್ ಗಳು ಎಷ್ಟೆಲ್ಲಾ ಅಲರ್ಟ್ ಆಗಿದ್ದಾರೆ ಎಂಥ ಅರ್ಥವಾಗುತ್ತದೆ ಎಂದಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಜ್ಯ ಸರ್ಕಾರಕ್ಕೆ 'ಸ್ಟಿಂಗ್ ಆಪರೇಷನ್' ಆತಂಕ: ಟ್ರ್ಯಾಪ್‌ಗೆ ಯತ್ನ ನಡೆಯುತ್ತಿದೆ, ಹುಷಾರಾಗಿರಿ ; 5 ಸಚಿವರಿಗೆ ಡಿಕೆಶಿ ಎಚ್ಚರಿಕೆ ಸಂದೇಶ

‘ವೈಯಕ್ತಿಕ ಮಹತ್ವಾಕಾಂಕ್ಷೆ ಅಲ್ಲ, ಧ್ಯೇಯಕ್ಕಾಗಿ ಬದುಕಿದ್ದೇನೆ, ದೇಶದ ಜನತೆಗೆ ತಲೆಬಾಗುತ್ತೇನೆ’: ಆಡಳಿತದಲ್ಲಿ 25 ವರ್ಷ ಪೂರೈಸಿದ ಪ್ರಧಾನಿ ಮೋದಿ ಮಾತು; Video

42 ಎಸೆತ, 102 ರನ್: ವಿರಾಟ್ ಕೊಹ್ಲಿಯ ಸಾರ್ವಕಾಲಿಕ ದಾಖಲೆಯೇ ಉಡೀಸ್‌ ಮಾಡಿದ ಶ್ರೇಯಸ್ ಅಯ್ಯರ್‌!

ಹಾಸನದ ಹೇಮಾವತಿ ನಾಲೆಯಲ್ಲಿ ಪ್ಲಾಸ್ಟಿಕ್‌ ಚೀಲದಲ್ಲಿ ವೃದ್ಧೆಯ ಶವ ಪತ್ತೆ: ಕೊಲೆ ಶಂಕೆ

ರಷ್ಯಾ ಕರಾವಳಿಯಲ್ಲಿ ಡ್ರೋನ್ ದಾಳಿ: ಹೊತ್ತಿ ಉರಿದ ತೈಲ ಟ್ಯಾಂಕರ್‌, 23 ಭಾರತೀಯ ಸಿಬ್ಬಂದಿ ಪಾರು..!