ಗಂಡಂದಿರನ್ನು ಸ್ಪ್ಲಿಟ್ ಎಸಿಗೆ ಹೋಲಿಸಿದ ವೀರೂ: ವೈರಲ್ ಆಯ್ತು ಸೆಹ್ವಾಗ್ ಟ್ವೀಟ್
ಸದಾ ಟ್ವಿಟ್ಟರ್ ಮೂಲಕ ಅವರಿವರ ಕಾಲೆಳೆಯುತ್ತಿದ್ದ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ಮನೆಯಲ್ಲಿದ್ದಾಗ ಪತ್ನಿ ಮುಂದೆ ಹೇಗಿರುತ್ತಾರೆ ಎಂಬುದರ ಬಗ್ಗೆ ...
ನವದೆಹಲಿ: ಸದಾ ಟ್ವಿಟ್ಟರ್ ಮೂಲಕ ಅವರಿವರ ಕಾಲೆಳೆಯುತ್ತಿದ್ದ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ಮನೆಯಲ್ಲಿದ್ದಾಗ ಪತ್ನಿ ಮುಂದೆ ಹೇಗಿರುತ್ತಾರೆ ಎಂಬುದರ ಬಗ್ಗೆ ಟ್ವಿಟ್ಟರ್ ನಲ್ಲಿ ಬಹಿರಂಗ ಪಡಿಸಿದ್ದಾರೆ.
ಸೆಹ್ವಾಗ್ ಟ್ವಿಟ್ಟರ್ ನಲ್ಲಿ ಹಾಕಿದ ಪೋಸ್ಟ್ ಗೆ 2 ಗಂಟೆಗಳಲ್ಲಿ 6.800 ಲೈಕ್ಸ್ ಹಾಗೂ 1ಸಾವಿರ ರಿಟ್ವೀಟ್ ಗಳು ಬಂದಿವೆ. ಗಂಡನ ಸ್ಥಿತಿ ಸ್ಪ್ಲಿಟ್ ಎಸಿ ಇದ್ದಂತೆ. ಹೊರಗಡೆ ಎಷ್ಟು ದೊಡ್ಡ ಮಟ್ಟಿಗೆ ಶಬ್ದ ಮಾಡಿದರೂ ಮನೆಯ ಒಳಗೆ ಕೂಲ್, ಸೈಲೆಂಟ್ ಮತ್ತು ರಿಮೋಟ್ ಕಂಟ್ರೋಲ್ಡ್ ಎಂದು ಟ್ವೀಟ್ ಮಾಡಿದ್ದಾರೆ.
ಗಂಡನ ಪರಿಸ್ಥಿತಿಯ ಬಗ್ಗೆ ಟ್ವೀಟ್ ಮಾಡಿರುವ ವಿರೇಂದ್ರ ಸೆಹ್ವಾಗ್ ತಮ್ಮ ಪತ್ನಿ ಆರತಿ ಜೊತೆಗಿನ ಸುಂದರ ಫೋಟೋ ಪೋಸ್ಟ್ ಮಾಡಿದ್ದಾರೆ.
ಸೆಹ್ವಾಗ್ ಟ್ವೀಟ್ ಗೆ ಹಲವು ಮಂದಿ ಪ್ರತಿಕ್ರಿಯೆ ನೀಡಿದ್ದು, ಗಂಡನ ಪರಿಸ್ಥಿತಿಯ ಬಗ್ಗೆ ವಿವರಿಸಿರುವ ಸೆಹ್ವಾಗ್ ಅನ್ನು ಎಲ್ಲರು ಮೆಚ್ಚಿ ಹೊಗಳಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.