ನವದೆಹಲಿ: ಐಪಿಎಲ್ 10ನೇ ಆವೃತ್ತಿಯ ಪಂದ್ಯದಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ವಿರುದ್ಧ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ರೋಚಕ ಜಯ ಗಳಿಸಿದೆ.
ಫಿರೋಜ್ ಷಾ ಕೋಟ್ಲಾ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ 4 ವಿಕೆಟ್ ಗಳಿಂದ ಜಯ ಗಳಿಸಿದೆ. 169 ರನ್ ಗಳ ಗುರಿ ಪಡೆದ ಕೋಲ್ಕತ್ತಾ ತಂಡ ಇನ್ನು ಒಂದು ಎಸೆತ ಇರುವಂತೆ ಗೆಲುವಿನ ನಗೆ ಬೀರಿತು.
ಕೋಲ್ಕತ್ತಾ ಪರ ಕನ್ನಡಿಗ ಮನೀಷ್ ಪಾಂಡೆ ಅಜೇಯ 69 ಹಾಗೂ ಯೂಸೂಫ್ ಪಠಾನ್ 59 ರನ್ ಗಳ ನೆರವಿನೊಂದಿಗೆ ಕೋಲ್ಕತ್ತಾ ಜಯ ಸಾಧಿಸಿತು.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ನಿಗದಿತ ಓವರ್ ನಲ್ಲಿ 7 ವಿಕೆಟ್ ನಷ್ಟಕ್ಕೆ 168 ರನ್ ಗಳಿಸಿತ್ತು. ಡೆಲ್ಲಿ ಪರ ರಿಷಬ್ ಪಂತ್ 38, ಸಂಜು ಸ್ಯಾಮ್ಸನ್ 39, ಸ್ಯಾಮ್ ಬಿಲ್ಲಿಂಗ್ಸ್ 21, ಕರುಣ್ ನಾಯರ್ 21, ಶ್ರೇಯಸ್ ಐಯರ್ 26 ರನ್ ಗಳಿಸಿದ್ದಾರೆ. ಕೋಲ್ಕತ್ತಾ ಪರ ನಾಥನ್ ಕೌಲ್ಟರ್ ನೈಲ್ 3 ವಿಕೆಟ್ ಪಡೆದಿದ್ದಾರೆ.