ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್ಸಿಬಿ) ಗಾಯಾಳು ಸರ್ಫರಾಜ್ ಬದಲಿಗೆ ಮಧ್ಯಪ್ರದೇಶದ ಬ್ಯಾಟ್ಸ್ ಮನ್ ಹರ್ ಪ್ರೀತ್ ಸಿಂಗ್ ಅವರನ್ನು ತಂಡಕ್ಕೆ ಸೇರಿಸಿಕೊಂಡಿದೆ.
ಐಪಿಎಲ್ ಹರಾಜಿನ ವೇಳೆ ತಪ್ಪು ವರದಿಗಳಿಂದಾಗಿ ಹರ್ ಪ್ರೀತ್ ಅವಕಾಶ ವಂಚಿತರಾಗಿದ್ದರು. ಮುಂಬೈನ ರೈಲ್ವೆ ನಿಲ್ದಾಣದೊಳಕ್ಕೆ ಕಾರು ಚಲಾಯಿಸಿ ಪೊಲೀಸರ ಬಲೆಗೆ ಬಿದ್ದಿದ್ದ ಆರೋಪಕ್ಕೆ ಅವರು ಗುರಿಯಾಗಿದ್ದರು. ಆದರೆ ಕೆಲ ಹೊತ್ತಿನ ಬಳಿಕ ಅದು ಹರ್ ಪ್ರೀತ್ ಅಲ್ಲ ಬದಲಿಗೆ 201ರ 19 ವರ್ಷದೊಳಗಿನವರ ತಂಡದ ಸಹ ಆಟಗಾರ ಹರ್ಮೀತ್ ಸಿಂಗ್ ಎಂದು ತಿಳಿದುಬಂದಿತ್ತು.
ಸಯ್ಯದ್ ಮುಷ್ತಾಕ್ ಅಲಿ ವಲಯ ಮಟ್ಟದ ಟಿ20 ಪಂದ್ಯಾವಳಿಯಲ್ಲಿ 4 ಪಂದ್ಯಗಳಿಂದ 211 ರನ್ ಗಳಿಸಿ ಹರ್ ಪ್ರೀತ್ ಮಿಂಚಿದ್ದರು. ಇದೇ ವೇಳೆ ವಿಜಯ್ ಹಜಾರೆ ಟ್ರೋಫಿಯಲ್ಲಿ 5 ಪಂದ್ಯಗಳಲ್ಲಿ 271 ರನ್ ಕಲೆಹಾಕಿದ್ದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos