ಈಡೆನ್ ಗಾರ್ಡನ್: ಈಡೆನ್ ಗಾರ್ಡನ್ ನಲ್ಲಿ ನಡೆಯುತ್ತಿರುವ ನಡೆಯುತ್ತಿರುವ ಆರ್ ಸಿಬಿ ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್ ನಡುವಿನ ಐಪಿಎಲ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಕೋಲ್ಕತ್ತಾ ತಂಡ 19.3 ಓವರ್ ಗಳಿಗೆ 131 ರನ್ ಗಳಿಗೆ ಸರ್ವಪತನ ಕಂಡಿದ್ದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ 132 ರನ್ ಗಳ ಗುರಿ ನೀಡಿದೆ.
ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ರಾಯಲ್ ಚಾಲೆಂಜರ್ಸ್ ತಂಡ ಪ್ರಾರಂಭದಿಂದ ಪಂದ್ಯದ ಮೇಲೆ ಹಿಡಿತ ಸಾಧಿಸಿತ್ತು. 4 ನೇ ಓವರ್ ನಲ್ಲಿ 52 ರನ್ ಗಳನ್ನು ಗಳಿಸಿದ್ದಾಗ ಗೌತಮ್ ಗಂಭೀರ್ ವಿಕೆಟ್ ಕಳೆದುಕೊಂಡ ಕೆಕೆಆರ್ ತಂಡ 100 ರನ್ ಗಳ ಗಡಿ ದಾಟುವ ವೇಳೆಗೆ 6 ವಿಕೆಟ್ ಗಳನ್ನು ಕಳೆದುಕೊಂಡು ಸಂಕಷ್ಟಕ್ಕೀಡಾಗಿತ್ತು.
14 ಓವರ್ ಗಳಿಗೆ 6 ವಿಕೆಟ್ ಕಳೆದುಕೊಂಡ ಕೆಕೆಆರ್ ತಂಡವನ್ನು 20 ಓವರ್ ಗಳಿಗೆ ಇನ್ನೂ 3 ಎಸೆತ ಬಾಕಿ ಇರುವಾಗಲೇ 131 ರನ್ ಗಳಿಗೆ ಆಲ್ ಔಟ್ ಮಾಡುವಲ್ಲಿ ಆರ್ ಸಿಬಿ ಯಶಸ್ವಿಯಾಯಿತು.