ಮುಂಬೈ: ಐಪಿಎಲ್ 10ನೇ ಆವೃತ್ತಿಯ 25ನೇ ಪಂದ್ಯದಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ ತಂಡ ಅಮೋಘ ಜಯ ಗಳಿಸಿದೆ.
ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ ತಂಡ ನಿಗದಿತ ಓವರ್ ನಲ್ಲಿ 8 ವಿಕೆಟ್ ನಷ್ಟಕ್ಕೆ 142 ರನ್ ಗಳಿಸಿತು. 143 ರನ್ ಗಳ ಸಾಧಾರಣ ಮೊತ್ತ ಬೆನ್ನಟ್ಟಿದ ಡೆಲ್ಲಿಗೆ 128 ಗಳಿಸುವ ಮೂಲಕ ಮುಂಬೈ ವಿರುದ್ಧ 14 ರನ್ ಗಳಿಂದ ಸೋಲು ಕಂಡಿತು.
ಮುಂಬೈ ಪರ ಬಟ್ಲರ್ 28, ಪೋಲಾರ್ಡ್ 26, ಹಾರ್ದಿಕ್ ಪಾಂಡ್ಯ 24 ರನ್ ಗಳಿಸಿದರು. ಇನ್ನು ಡೆಲ್ಲಿ ಬೌಲರ್ ಗಳಾದ ಅಮಿತ್ ಮಿಶ್ರಾ, ಕಮ್ನಿಂನ್ಸ್ ತಲಾ 2 ವಿಕೆಟ್ ಪಡೆದರು.
ಡೆಲ್ಲಿ ಪರ ರಬಡಾ 44 ಮತ್ತು ಕ್ರಿಸ್ ಮೋರಿಸ್ 52 ರನ್ ಗಳಿಸಿದ್ದನ್ನು ಬಿಟ್ಟರೆ ಮತ್ಯಾವ ಆಟಗಾರ ಎರಡಂಕಿ ದಾಟಲು ವಿಫಲರಾದರು. ಇನ್ನು ಮುಂಬೈ ಬೌಲರ್ ಗಳಾದ ಮೇಘ್ಲನ್ ಗನ್ 3, ಜಸ್ ಪ್ರೀತ್ ಬೂಮ್ರಾ 2 ವಿಕೆಟ್ ಪಡೆದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics