ಕ್ರಿಕ್ ಇನ್ಫೋ ಚಿತ್ರ 
ಕ್ರಿಕೆಟ್

ಕೊಹ್ಲಿ "ಗೋಲ್ಡನ್ ಡಕ್" ಆದ 3ನೇ ಪಂದ್ಯವೂ ಸೋತ ಆರ್ ಸಿಬಿ!

ಕೊಹ್ಲಿ ಶೂನ್ಯಕ್ಕೆ ಔಟ್ ಆದರೆ ಆರ್ ಸಿಬಿ ತಂಡ ಗೆಲ್ಲುವುದಿಲ್ಲ ಎಂಬ ಅಭಿಮಾನಿಗಳ ನಂಬಿಕೆ ಮತ್ತೆ ಸಾಬೀತಾಗಿದ್ದು, ಕೋಲ್ಕತಾದಲ್ಲಿ ನಡೆದ ಪಂದ್ಯದಲ್ಲೂ ಕೂಡ..

ಕೋಲ್ಕತಾ: ನಾಯಕ ವಿರಾಟ್ ಕೊಹ್ಲಿ ಶೂನ್ಯಕ್ಕೆ ಔಟ್ ಆದರೆ ಆರ್ ಸಿಬಿ ತಂಡ ಗೆಲ್ಲುವುದಿಲ್ಲ ಎಂಬ ಅಭಿಮಾನಿಗಳ ನಂಬಿಕೆ ಮತ್ತೆ ಸಾಬೀತಾಗಿದ್ದು, ಕೋಲ್ಕತಾದಲ್ಲಿ ನಡೆದ ಪಂದ್ಯದಲ್ಲೂ ಕೂಡ ಕೊಹ್ಲಿ ಶೂನ್ಯಕ್ಕೆ ಔಟಾದ ಈ ಪಂದ್ಯದಲ್ಲಿ ಆರ್ ಸಿಬಿ ಹೀನಾಯ ಸೋಲು ಕಂಡಿದೆ.
ಮೊದಲ ಓವರ್ ನ ಮೂರನೇ ಎಸೆತದಲ್ಲೇ ಕೊಹ್ಲಿ ಕೋಲ್ಕತಾದ ಕಾಲ್ಟರ್ ನೈಲ್ ಬೌಲಿಂಗ್ ನಲ್ಲಿ ಪಾಂಡೆಗೆ ಕ್ಯಾಚಿತ್ತು ಹೊರ ನಡೆದರು. ಆಗ ಆರ್ ಸಿಬಿ ಮೊತ್ತ ಕೇವಲ 1 ರನ್ ಆಗಿತ್ತು. ಈ ಆಘಾತದಿಂದ ಹೊರ ಬರದ ಆರ್ ಸಿಬಿ ಅಂತಿಮವಾಗಿ ಕೇವಲ 49 ರನ್ ರನ್ ಗಳಿಗೇ ಆಲ್ ಔಟ್  ಆಗುವ ಮೂಲಕ ಕೋಲ್ಕತಾ ವಿರುದ್ಧ ಬರೊಬ್ಬರಿ 82 ರನ್ ಗಳ ಹೀನಾಯ ಸೋಲು ಕಂಡಿದೆ. ಆರ್ ಸಿಬಿ ಪರ ಜಾದವ್ ಗಳಿಸಿದ 9 ರನ್ ಗಳೇ ತಂಡದ ಬ್ಯಾಟ್ಸಮನ್ ಓಬ್ಬನ ವೈಯುಕ್ತಿಕ ಗರಿಷ್ಠ ಗಳಿಕೆ ರನ್ ಗಳೆಂದರೆ ಆರ್ ಸಿಬಿ ಬ್ಯಾಟಿಂಗ್ ಎಷ್ಟು ಕಳಪೆಯಾಗಿತ್ತು ಎಂಬುದನ್ನು  ಊಹಿಸಬಹುದು.
ಐಪಿಎಲ್ ಇತಿಹಾಸದಲ್ಲೇ 2ನೇ ಬಾರಿಗೆ ಪಂದ್ಯವೊಂದರಲ್ಲಿ 20 ವಿಕೆಟ್ ಪತನ
ಇಂದಿನ ಕೋಲ್ಕತಾ ಮತ್ತು ಬೆಂಗಳೂರು ನಡುವಿನ ಪಂದ್ಯ ದಾಖಲೆಯೊಂದಕ್ಕೆ ಸಾಕ್ಷಿಯಾಯಿತು. ಐಪಿಎಲ್ ಇತಿಹಾಸದಲ್ಲೇ ಪಂದ್ಯವೊಂದರಲ್ಲಿ 20 ವಿಕೆಟ್ ಗಳು ಪತನವಾಗಿದ್ದು ಇದು ಎರಡನೇ ಬಾರಿಯಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!