ಕಳೆದ 6 ತಿಂಗಳಿನಿಂದ ಕೊಹ್ಲಿ ನಾಯಕತ್ವದ ತಂಡಕ್ಕೆ ವೇತನ ನೀಡದ ಬಿಸಿಸಿಐ
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಜಗತ್ತಿನ ಶ್ರೀಮಂತ ಕ್ರಿಕೆಟ್ ಮಂಡಳಿಯಾಗಿದ್ದರು. ಕಳೆದ ಆರು ತಿಂಗಳಿನಿಂದ ಟೀಂ ಇಂಡಿಯಾದ ಆಟಗಾರರಿಗೆ ವೇತನ...
ಮುಂಬೈ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಜಗತ್ತಿನ ಶ್ರೀಮಂತ ಕ್ರಿಕೆಟ್ ಮಂಡಳಿಯಾಗಿದ್ದರು. ಕಳೆದ ಆರು ತಿಂಗಳಿನಿಂದ ಟೀಂ ಇಂಡಿಯಾದ ಆಟಗಾರರಿಗೆ ವೇತನ ನೀಡಿಲ್ಲ ಎಂದು ಪತ್ರಿಕೆಯೊಂದು ವರದಿ ಮಾಡಿದೆ.
2016-17ರಲ್ಲಿ ಭಾರತ ತಂಡ 13 ಪಂದ್ಯಗಳನ್ನು ಆಡಿದ್ದು ನ್ಯೂಜಿಲೆಂಡ್, ಇಂಗ್ಲೆಂಡ್, ಬಾಂಗ್ಲಾದೇಶ ಮತ್ತು ಆಸ್ಟ್ರೇಲಿಯಾ ವಿರುದ್ಧದ ಸರಣಿಯನ್ನು ಗೆದ್ದಿದೆ. ಇನ್ನು ತಂಡದಲ್ಲಿ ಆಡಿದ್ದ ಹನ್ನೊಂದು ಆಟಗಾರರಿಗೆ 15 ಲಕ್ಷ, ಇನ್ನುಳಿದ ಆಟಗಾರರಿಗೆ 7 ಲಕ್ಷ ನೀಡಬೇಕಿತ್ತು. ಆದರೆ ಇಲ್ಲಿಯವರೆಗೂ ಬಿಸಿಸಿಐ ವೇತನವನ್ನು ಪಾವತಿಸಿಲ್ಲ.
ಇನ್ನು ಟೀಂ ಇಂಡಿಯಾ ಪುರುಷರ ತಂಡವಲ್ಲ, ಮಹಿಳಾ ತಂಡವೂ ಸಹ ವೇತನಕ್ಕಾಗಿ ಕಾದುಕುಳಿತಿದೆ. ಟೀಂ ಇಂಡಿಯಾ ಮಹಿಳಾ ತಂಡದ ಪ್ರತಿ ಆಟಗಾರರಿಗೂ ತಲಾ 1 ಲಕ್ಷ ವೇತನವನ್ನು ಬಿಸಿಸಿಐ ಬಾಕಿ ಉಳಿಸಿಕೊಂಡಿದೆ.
ಟೀಂ ಇಂಡಿಯಾದ ಆಟಗಾರರಿಗೆ ಟೆಸ್ಟ್ ಪಂದ್ಯವೊಂದಕ್ಕೆ 15 ಲಕ್ಷ, ಏಕದಿನಕ್ಕೆ 6 ಲಕ್ಷ ಮತ್ತು ಟಿ20 ಪಂದ್ಯಕ್ಕೆ 3 ಲಕ್ಷ ನಿಗದಿಯಾಗಿದ್ದು ಆದರೆ ಇದನ್ನು ಬಿಸಿಸಿಐ ಬಾಕಿ ಉಳಿಸಿಕೊಂಡಿದೆ. ಸುಪ್ರೀಂ ಕೋರ್ಟ್ ಆದೇಶದ ನಂತರ ಬಿಸಿಸಿಐಯಲ್ಲಿ ಅವ್ಯವಸ್ಥೆ ಉಂಟಾಗಿದ್ದು ಈ ಕಾರಣದಿಂದ ಬಿಸಿಸಿಐ ವೇತನ ಬಾಕಿ ಉಳಿಸಿಕೊಂಡಿದೆ.