ಕೊಲಂಬೊ ದ್ವಿತೀಯ ಟೆಸ್ಟ್: ಮೊದಲ ದಿನದಾಟಕ್ಕೆ ಭಾರತ 3 ವಿಕೆಟ್‌ಗೆ 344 ರನ್
ಶ್ರೀಲಂಕಾ ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯದ ಮೊದಲ ದಿನದಾಟದ ಅಂತ್ಯಕ್ಕೆ ಟೀಂ ಇಂಡಿಯಾ 3 ವಿಕೆಟ್ ನಷ್ಟಕ್ಕೆ 344 ರನ್ ಗಳನ್ನು ಪೇರಿಸಿದೆ...
ಕೊಲಂಬೊ: ಶ್ರೀಲಂಕಾ ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯದ ಮೊದಲ ದಿನದಾಟದ ಅಂತ್ಯಕ್ಕೆ ಟೀಂ ಇಂಡಿಯಾ 3 ವಿಕೆಟ್ ನಷ್ಟಕ್ಕೆ 344 ರನ್ ಗಳನ್ನು ಪೇರಿಸಿದೆ.
ಕೊಲಂಬೊದಲ್ಲಿ ನಡೆಯುತ್ತಿರುವ ದ್ವಿತೀಯ ಟೆಸ್ಟ್ ನಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ದಿನದಾಟದ ಅಂತ್ಯಕ್ಕೆ 344 ರನ್ ಗಳ ಬೃಹತ್ ಮೊತ್ತ ಕಲೆಹಾಕಿದೆ. ಭಾರತ ಪರ ಶಿಖರ್ ಧವನ್ 35, ಕೆಎಲ್ ರಾಹುಲ್ 57 ಮತ್ತು ನಾಯಕ ವಿರಾಟ್ ಕೊಹ್ಲಿ 13 ರನ್ ಸಿಡಿಸಿದ್ದಾರೆ.
ಇನ್ನು ಮೊದಲ ದಿನದ ಅಂತ್ಯಕ್ಕೆ ಚೇತೇಶ್ವರ ಪೂಜಾರ ಅಜೇಯ 128 ಮತ್ತು ಅಜಿಂಕ್ಯ ರಹಾನೆ ಅಜೇಯ 103 ರನ್ ಸಿಡಿಸಿದ್ದು ಎರಡನೇ ದಿನದ ಆಟವನ್ನು ಪ್ರಾರಂಭಿಸಲಿದ್ದಾರೆ.
ಶ್ರೀಲಂಕಾ ಪರ ಹೆರಾತ್ ಮತ್ತು ಪೆರೇರಾ ತಲಾ 1 ವಿಕೆಟ್ ಪಡೆದಿದ್ದಾರೆ.