ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರಿಕೆಟ್

ಕೊಲಂಬೊ ದ್ವಿತೀಯ ಟೆಸ್ಟ್: ಟೀಂ ಇಂಡಿಯಾ ಪ್ರಥಮ ಇನ್ನಿಂಗ್ಸ್ 622 ರನ್‌ಗೆ ಡಿಕ್ಲೇರ್

ಶ್ರೀಲಂಕಾ ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯದ ಪ್ರಥಮ ಇನ್ನಿಂಗ್ಸ್ ಅನ್ನು ಟೀಂ ಇಂಡಿಯಾ 622 ರನ್ ಗಳಿಗೆ ಡಿಕ್ಲೇರ್ ಮಾಡಿಕೊಂಡಿದೆ...

ಟೀಂ ಇಂಡಿಯಾ
Vishwanath S
Updated On : 4 Aug 2017, 4:45 am
ಕೊಲಂಬೊ: ಶ್ರೀಲಂಕಾ ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯದ ಪ್ರಥಮ ಇನ್ನಿಂಗ್ಸ್ ಅನ್ನು ಟೀಂ ಇಂಡಿಯಾ 622 ರನ್ ಗಳಿಗೆ ಡಿಕ್ಲೇರ್ ಮಾಡಿಕೊಂಡಿದೆ. 
ಕೊಲಂಬೊದಲ್ಲಿ ನಡೆಯುತ್ತಿರುವ ದ್ವಿತೀಯ ಟೆಸ್ಟ್ ನಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ಮೊದಲ ದಿನದಾಟದ ಅಂತ್ಯಕ್ಕೆ 344 ರನ್ ಗಳ ಬೃಹತ್ ಮೊತ್ತ ಕಲೆಹಾಕಿತ್ತು. ಚೇತೇಶ್ವರ ಪೂಜಾರ ಮತ್ತು ಅಜಿಂಕ್ಯ ರಹಾನೆ ಅವರ ಭರ್ಜರಿ ಶತಕದ ನೆರವಿನಿಂದ ಟೀಂ ಇಂಡಿಯ ಬೃಹತ್ ಮೊತ್ತ ಕಲೆ ಹಾಕಲು ಸಾಧ್ಯವಾಯಿತು. 
ಭಾರತ ಪರ ಆರಂಭಿಕರಾಗಿ ಕಣಕ್ಕಿಳಿದ ಶಿಖರ್ ಧವನ್ 35 ಮತ್ತು ಕೆಎಲ್ ರಾಹುಲ್ 57 ರನ್ ಗಳಿಗೆ ಔಟಾದರೆ ನಾಯಕ ವಿರಾಟ್ ಕೊಹ್ಲಿ ಕೇವಲ 13 ರನ್ ಗಳಿಗೆ ಔಟ್ ಆಗಿ ಪೆವಿಲಿಯನ್ ಸೇರಿದರು. ನಂತರ ಪೂಜಾರ 133 ಮತ್ತು ಅಜಿಂಕ್ಯ ರಹಾನೆ 132 ರನ್ ಗಳನ್ನು ಸಿಡಿಸಿ ಔಟಾದರು. ಈ ಮಧ್ಯೆ ಆರ್ ಅಶ್ವಿನ್ 54 ರನ್ ಸಿಡಿಸಿದರೆ, ವೃದ್ಧಿಮಾನ್ ಸಹಾ 67 ರನ್ ಸಿಡಿಸಿ ಔಟಾದರು. ನಂತರ ಬಂದ ರವೀಂದ್ರ ಜಡೇಜಾ ಭರ್ಜರಿ ಬ್ಯಾಟಿಂಗ್ ನಿಂದಾಗಿ ತಂಡ 600ರ ಗಡಿ ದಾಟಲು ಸಾಧ್ಯವಾಯಿತು. 

Advertisement

Advertisement

ಶ್ರೀಲಂಕಾ ಪರ ಹೆರತ್ 4, ಪುಷ್ಪಕುಮಾರ 2 ಮತ್ತು ಕರುಣರತ್ನೆ ಹಾಗೂ ಪೆರೇರಾ ತಲಾ 1 ವಿಕೆಟ್ ಪಡೆದಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement