ರವೀಂದ್ರ ಜಡೇಜಾ-ಅಕ್ಷರ್ ಪಟೇಲ್
ನವದೆಹಲಿ: ಶ್ರೀಲಂಕಾ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಐಸಿಸಿ ನೀತಿ ಸಂಹಿತೆ ಉಲ್ಲಂಘಿಸಿದ್ದ ಆರೋಪದ ಮೇಲೆ ಟೀಂ ಇಂಡಿಯಾ ಬೌಲರ್ ರವೀಂದ್ರ ಜಡೇಜಾಗೆ ಪಳ್ಳೆಕೆಲೆ ಟೆಸ್ಟ್ ಪಂದ್ಯಕ್ಕೆ ನಿಷೇಧ ಹೇರಿದ್ದರಿಂದ ಜಡೇಜಾ ಬದಲಿಗೆ ಸ್ಪಿನ್ನರ್ ಅಕ್ಷರ್ ಪಟೇಲ್ ಕಣಕ್ಕಿಳಿಯಲಿದ್ದಾರೆ.
ಬಿಸಿಸಿಐನ ಕ್ರಿಕೆಟಿಗರ ಆಯ್ಕೆ ಸಮಿತಿಯು ರವೀಂದ್ರ ಜಡೇಜಾರ ಬದಲಿಗೆ ಅಕ್ಷರ್ ಪಟೇಲ್ ಅವರನ್ನು ಆಯ್ಕೆ ಮಾಡಿದೆ. ಆಗಸ್ಟ್ 12ರಿಂದ ಪಳ್ಳೆಕೆಲೆಯಲ್ಲಿ ಆರಂಭಗೊಳ್ಳಲಿರುವ ಟೆಸ್ಟ್ ಪಂದ್ಯದಲ್ಲಿ ಅಕ್ಷರ್ ಪಟೇಲ್ ಕಣಕ್ಕಿಳಿಯುವ ಸಾಧ್ಯತೆ ಇದೆ.
ಲಂಕಾ ವಿರುದ್ಧದ 2ನೇ ಟೆಸ್ಟ್ ನ 3ನೇ ದಿನದಾಟದ ವೇಳೆ 58ನೇ ಓವರ್ ಮಾಡಿದ್ದ ಜಡೇಜಾ ಐಸಿಸಿ ನಿಯಮ ಉಲ್ಲಂಘಿಸಿದ್ದರು. ಜಡೇಜಾ ಎಸೆದ ಚೆಂಡನ್ನು ಲಂಕಾದ ಆಟಗಾರ ದಿಮುತ್ ಕರುಣರತ್ನೆ ರಕ್ಷಣಾತ್ಮಕವಾಗಿ ಆಡಿ ಚೆಂಡನ್ನು ಜಡೇಜಾ ಕೈ ಸೇರುವಂತೆ ಹೊಡೆದಿದ್ದರು. ಕೂಡಲೇ ಜಡೇಜಾ ಚೆಂಡನ್ನು ಅವರತ್ತ ಥ್ರೋ ಮಾಡಿದರು. ಇದು ಬ್ಯಾಟ್ಸಮನ್ ಗೆ ತಗುಲಿಲ್ಲವಾದರೂ ಇದೊಂದು ಅಪಾಯಕಾರಿ ಥ್ರೋ ಆಗಿತ್ತು.
ಈ ಬಗ್ಗೆ ಸ್ವತಃ ಆನ್ ಫೀಲ್ಡ್ ಅಂಪೈರ್ ಜಡೇಜಾಗೆ ಎಚ್ಚರಿಕೆ ನೀಡಿದ್ದರು. ಆ ಕ್ಷಣಕ್ಕೆ ಜಡೇಜಾ ಕ್ಷಮೆ ಕೋರಿದ್ದರು. ಈ ಘಟನೆಯನ್ನು ಮ್ಯಾಚ್ ರೆಫರಿ ಐಸಿಸಿಗೆ ಮಾಹಿತಿ ನೀಡಿದ್ದರು. ಇದೀಗ ಜಡೇಜಾ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಐಸಿಸಿ ಅವರಿಗೆ ಒಂದು ಪಂದ್ಯದ ನಿಷೇಧ ಹೇರಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics