ಏಳು-ಬೀಳುವಿನಲ್ಲೂ ಟೀಂ ಇಂಡಿಯಾಗೆ ನನ್ನ ಬೆಂಬಲ ನಿರಂತರ: ಸಚಿನ್
ಟೀಂ ಇಂಡಿಯಾದ ಪ್ರದರ್ಶನ ಕಳಪೆ ಹಂತಕ್ಕೆ ತಲುಪಿದರೂ ನನ್ನ ಬೆಂಬಲ ನಿರಂತರವಾಗಿರುತ್ತದೆ ಎಂದು ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಹೇಳಿದ್ದಾರೆ...
ಮುಂಬೈ: ಟೀಂ ಇಂಡಿಯಾದ ಪ್ರದರ್ಶನ ಕಳಪೆ ಹಂತಕ್ಕೆ ತಲುಪಿದರೂ ನನ್ನ ಬೆಂಬಲ ನಿರಂತರವಾಗಿರುತ್ತದೆ ಎಂದು ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಹೇಳಿದ್ದಾರೆ.
ಟೀಂ ಇಂಡಿಯಾ ಪುರುಷರ ಅಥವಾ ಮಹಿಳಾ ತಂಡ ಯಾವುದೇ ಆಗಿರಲಿ, ಎರಡೂ ತಂಡಗಳಿಗೂ ತನ್ನ ಬೆಂಬಲ ಸದಾ ಇರುತ್ತದೆ ಎಂದು ಸಚಿನ್ ಹೇಳಿದ್ದಾರೆ.
ಕ್ರೀಡೆಯಲ್ಲಿ ಏಳು-ಬೀಳು ಸ್ವಾಭಾವಿಕವಾದದ್ದು ಎಲ್ಲಾ ಹಂತದಲ್ಲಿಯೂ ತಂಡದ ಜತೆಗಿರುತ್ತೇನೆ. ತನ್ನಿಂದ ಏನು ಸಾಧ್ಯವೋ ಅಷ್ಟು ಸಹಾಯ ಮಾಡುತ್ತೇನೆ. ಅವರ ಸಾಧನೆಗೆ ಅಭಿನಂದನೆಗಳು ಎಂದು ತಿಳಿಸಿದ್ದಾರೆ.