ಕ್ರಿಕೆಟ್

ಏಕದಿನ ಕ್ರಿಕೆಟ್‌ ನಾಯಕತ್ವ ಸ್ಥಾನದಿಂದ ಕೆಳಗಿಳಿದ ಎಬಿಡಿ

Raghavendra Adiga
ಜೋಹಾನ್ಸ್‌ಬರ್ಗ್‌: ದಕ್ಷಿಣ ಆಫ್ರಿಕಾದ ಶ್ರೇಷ್ಠ ಬ್ಯಾಟ್ಸ್‌ಮನ್‌ ಎಬಿ ಡಿವಿಲಿಯರ್ಸ್‌ ಏಕದಿನ ಕ್ರಿಕೆಟ್‌ ತಂಡದ ನಾಯಕತ್ವ ತ್ಯಜಿಸಿದ್ದಾರೆ.
"ಅಕ್ಟೋಬರ್‌ ನಲ್ಲಿ ನಡೆಯುವ ಎಲ್ಲಾ ಮಾದರಿ ಆಟಗಳಲ್ಲೂ ನಾನು ಆಡಲು ಸಿದ್ದನಿದ್ದೇನೆ" ಎಂದಿರುವ ಡಿವಿಲಿಯರ್ಸ್‌ ನಿವೃತ್ತಿ ಬಗೆಗಿನ ಊಹಾಪೋಹಕ್ಕೆ ತೆರೆ ಎಳೆದಿದ್ದಾರೆ. "2004 ರಿಂದ ನಿರಂತರವಾಗಿ ಕ್ರಿಕೆಟ್ ಕ್ಷೇತ್ರದಲ್ಲಿ ಇದ್ದೇನೆ. ಎಲ್ಲಾ ಬಗೆಯ ಕ್ರಿಕೆಟ್ ಆಡಿದ್ದೇನೆ. ಆದರೆ ದೇಶವನ್ನು ಪ್ರತಿನಿಧಿಸುವ ಹಂಬಲ ಮಾತ್ರ ಇದ್ದೇ ಇದೆ" ಎಂದರು.
"ಸದ್ಯ ತಂಡದ ಇನ್ನೊಬ್ಬ ಆಟಗಾರನಾದ ಡುಪ್ಲೆಸಿಸ್ ಎಲ್ಲ ಮಾದರಿಯಲ್ಲೂ ತಂಡವನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ" ಎನ್ನುವ  ಡಿವಿಲಿಯರ್ಸ್‌, ಮುಂದಿನ ದಿನಗಳಲ್ಲಿ ತಂಡಕ್ಕೆ ಸಂಪೂರ್ಣ ಬೆಂಬಲ ನೀಡುವುದಾಗಿ ತಿಳಿಸಿದರು.
SCROLL FOR NEXT