ಲಂಕಾ ವಿರುದ್ಧ ಸೋಲುತ್ತಿದ್ದ ಪಂದ್ಯವನ್ನು ಗೆಲ್ಲಿಸಿದ ಧೋನಿ-ಭುವನೇಶ್ವರ್ ಕುಮಾರ್
ಶ್ರೀಲಂಕಾ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಸೋಲಿನ ಸುಳಿಯಲ್ಲಿದ್ದ ಟೀಂ ಇಂಡಿಯಾವನ್ನು ವೇಗದ ಬೌಲರ್ ಭುವನೇಶ್ವರ್ ಕುಮಾರ್ ಮತ್ತು ಮಾಜಿ ನಾಯಕ...
ಪಲ್ಲೆಕೆಲೆ: ಶ್ರೀಲಂಕಾ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಸೋಲಿನ ಸುಳಿಯಲ್ಲಿದ್ದ ಟೀಂ ಇಂಡಿಯಾವನ್ನು ವೇಗದ ಬೌಲರ್ ಭುವನೇಶ್ವರ್ ಕುಮಾರ್ ಮತ್ತು ಮಾಜಿ ನಾಯಕ ಎಂಎಸ್ ಧೋನಿ ಗೆಲುವಿನ ದಡ ಸೇರಿಸಿದ್ದಾರೆ.
ಮಹೇಂದ್ರ ಸಿಂಗ್ ಧೋನಿ ಮತ್ತು ಭುವನೇಶ್ವರ್ ಕುಮಾರ್ ಎಂಟನೇ ವಿಕೆಟ್ ಗೆ 100 ರನ್ ಗಳ ಜತೆಯಾಟ ನೀಡಿದ್ದು ತಂಡ 3 ವಿಕೆಟ್ ಗಳಿಂದ ಗೆಲ್ಲಲು ಸಾಧ್ಯವಾಯಿತು. ಇದರೊಂದಿಗೆ ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯಲ್ಲಿ ಭಾರತ 2-0 ಮುನ್ನಡೆ ಸಾಧಿಸಿದೆ.
ಪಾಲೆಕೆಲೆ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ 2ನೇ ಏಕದಿನ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ 236 ರನ್ ಗಳಿಸಿತು. 237 ರನ್ ಗಳ ಅಲ್ಪಮೊತ್ತದ ಗುರಿ ಬೆನ್ನಟ್ಟಿದ ಟೀಂ ಇಂಡಿಯಾಗೆ ಆರಂಭಿಕ ಆಟಗಾರರ ರೋಹಿತ್ ಶರ್ಮಾ ಮತ್ತು ಶಿಖರ್ ಧವನ್ ಭರ್ಜರಿ ಓಪನಿಂಗ್ ನೀಡಿದರು. ಇವರಿಬ್ಬರ ಜತೆಯಾಟದಲ್ಲಿ 109 ರನ್ ಮೂಡಿಬಂತು. ನಂತರ 54 ರನ್ ಗಳಿಸಿದ್ದ ರೋಹಿತ್ ಶರ್ಮಾ ಎಲ್ಬಿಡಬ್ಲ್ಯೂ ಬಲೆಗೆ ಬಿದ್ದರು. ಇದಾದ ನಂತರ ಅರ್ಧ ಶತಕದ ಹೊಸ್ತಿಲಲ್ಲಿದ್ದ ಶಿಖರ್ ಧವನ್ ಸಿರಿವರ್ಧನೆಗೆ ವಿಕೆಟ್ ಒಪ್ಪಿಸಿದರು.
ಇದಾದ ಬಳಿಕ ಇಂಡಿಯಾದ ಆಟಗಾರರ ಪೆವಿಲಿಯನ್ ಪರೇಡ್ ಮುಂದುವರೆಯಿತು. ಕೆಎಲ್ ರಾಹುಲ್(4), ಕೇದಾರ್ ಜಾಧವ್(1), ವಿರಾಟ್ ಕೊಹ್ಲಿ(4) ಹಾರ್ದಿಕ್ ಪಾಂಡ್ಯ(0) ಮತ್ತು ಅಕ್ಷರ್ ಪಟೇಲ್ 6 ರನ್ ಗಳಿಸಿ ಪೆವಿಲಿಯನ್ ಸೇರಿದರು. ಲಂಕಾ ಪರ ಧನಂಜಯ 6 ವಿಕೆಟ್ ಪಡೆದರು.
ಇನ್ನು ಲಂಕಾ ಮಿಲಿಂದ ಸಿರಿವರ್ಧನೆ (58) ಹಾಗೂ ಚಮರಾ ಕಪುಗೆದರಾ (40) ರನ್ ಗಳನ್ನು ಗಳಿಸಿದ್ದ ಇಬ್ಬರು ಆಟಗಾರರ ನೆರವಿನಿಂದ ಲಂಕಾ 91 ರನ್ ಗಳನ್ನು ಕಲೆಹಾಕಲು ಸಾಧ್ಯವಾಯಿತು.
ಜಸ್ಪ್ರೀತ್ ಬೂಮ್ರಾ 43 ರನ್ ಗಳನ್ನು ನೀಡಿ 4 ವಿಕೆಟ್ ಪಡೆದು ಉತ್ತಮ ಬೌಲರ್ ಎನಿಸಿದರು