ಉಪುಲ್ ತರಂಗ 
ಕ್ರಿಕೆಟ್

ಶ್ರೀಲಂಕಾದ ನಾಯಕ ಉಪುಲ್ ತರಂಗಗೆ 2 ಪಂದ್ಯಗಳಿ ನಿಷೇಧ ವಿಧಿಸಿದ ಐಸಿಸಿ

ಶ್ರೀಲಂಕಾ ತಂಡದ ನಾಯಕ ಉಪುಲ್ ತರಂಗ ಭಾರತ ವಿರುದ್ಧದ ಎರಡನೇ ಏಕದಿನ ಪಂದ್ಯದ ವೇಳೆ ನಿಧಾನ ಗತಿಯ ಓವರ್ ರೇಟ್ ನೀಡಿದ್ದಕ್ಕಾಗಿ ಎರಡು ಏಕದಿನ ಪಂದ್ಯಗಳ ನಿಷೇಧಕ್ಕೆ ಒಳಗಾಗಿದ್ದಾರೆ.

ಪಲ್ಲೇಕಲೆ: ಶ್ರೀಲಂಕಾ ತಂಡದ ನಾಯಕ ಉಪುಲ್ ತರಂಗ ಭಾರತ ವಿರುದ್ಧದ ಎರಡನೇ ಏಕದಿನ ಪಂದ್ಯದ ವೇಳೆ ನಿಧಾನ ಗತಿಯ ಓವರ್ ರೇಟ್ ನೀಡಿದ್ದಕ್ಕಾಗಿ ಎರಡು ಏಕದಿನ ಪಂದ್ಯಗಳ ನಿಷೇಧಕ್ಕೆ ಒಳಗಾಗಿದ್ದಾರೆ.
ಪಂದ್ಯವನ್ನು 47 ಓವರುಗಳಿಗೆ ತಗ್ಗಿಸಿದರೂ ಶ್ರೀಲಂಕಾವು ನಿಧಾನ ಗತಿಯ ಓವರ್ ರೇಟ್ ನೀಡಿದ್ದು ನಾಯಕ ತರಂಗ ಪಾಲಿಗೆ ಮುಳುವಾಗಿದೆ. ಶ್ರೀಲಂಕಾ ಏಕದಿನ ತಂಡದ ನಾಯಕ ಉಪುಲ್ ತರಂಗ ಮೇಲೆ ನಿಧಾನ ಗತಿಯ ಓವರ್‌ ರೇಟ್‌ ಗಾಗಿ ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಎರಡು ಪಂದ್ಯಗಳ ನಿಷೇಧ ಹೇರಿದೆ. ಐದು ಪಂದ್ಯಗಳ ಸರಣಿಯಲ್ಲಿ ಭಾರತವು 2-0 ಮುನ್ನಡೆ ಸಾಧಿಸಿದೆ.
ಈ ಸಮಯದಲ್ಲಿ ಭಾರತ ವಿರುದ್ಧದ ಎರಡು ಪಂದ್ಯಗಳಲ್ಲಿ ಆತಿಥೇಯ ಶ್ರೀಲಂಕಾ ತಂಡವನ್ನು ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಚಮರ ಕಪುಗೇದರ ಮುನ್ನಡೆಸಲಿದ್ದಾರೆ ಎನ್ನಲಾಗಿದೆ. ಭಾರತದ ವಿರುದ್ಧದ ಮೊದಲೆರಡು ಪಂದ್ಯಗಳಲ್ಲಿ ಸೋಲು ಅನುಭವಿಸಿರುವ ಲಂಕಾ ಸರಣಿ ಗೆಲ್ಲಲು  ಮುಂದಿನ ಮೂರು ಪಂದ್ಯಗಳಲ್ಲಿ ಗೆಲುವು ದಾಖಲಿಸಬೇಕಾದ ಒತ್ತಡಕ್ಕೆ ಸಿಲುಕಿದೆ.
ಈ ನಡುವೆ ಲಂಕಾದ ಆರಂಭಿಕ ಆಟಗಾರ ಧುನುಷ್ಕಾ ಗುಣತಿಲಕ ಗಾಯದ ಸಮಸ್ಯೆಯಿಂದಾಗಿ ತಂಡದಿಂದ ಹೊರನಡೆದಿದ್ದಾರೆ. ಭಾರತ ವಿರುದ್ಧ ದ್ವಿತೀಯ ಏಕದಿನ ಪಂದ್ಯದಲ್ಲಿ ಫೀಲ್ಡಿಂಗ್ ವೇಳೆ ಗಾಯಕ್ಕೊಳಗಾಗಿರುವ ಗುಣತಿಲಕ ಅವರಿಗೆ 10 ದಿನಗಳ ವಿಶ್ರಾಂತಿ ಸೂಚಿಸಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ನ್ಯಾಯಾಂಗದಲ್ಲಿ ಭ್ರಷ್ಟಾಚಾರದ ಪಾಠ: ಕೇಂದ್ರ ಕ್ಷಮೆಯಾಚಿಸುತ್ತಿದ್ದಂತೆ NCERT ಪಠ್ಯ ಪುಸ್ತಕ ಬ್ಯಾನ್, ಪ್ರತಿಗಳನ್ನು ವಶಕ್ಕೆ ಪಡೆಯಲು ಸುಪ್ರೀಂ ಸೂಚನೆ

'ನಿಮ್ಮ ಭಾಷಣ ನಾಚಿಕೆಯಿಲ್ಲದೆ ಸಮರ್ಥನೆ ಮಾಡಿಕೊಂಡಂತೆ ಇತ್ತು': 1947ರ ಐನ್ ಸ್ಟೈನ್ ನೆಹರೂಗೆ ಬರೆದ ಪತ್ರ ಉಲ್ಲೇಖಿಸಿ Modi ಟೀಕಿಸಿದ ಕಾಂಗ್ರೆಸ್

Ranji Trophy final: ಔಕಿಬ್ ನಬಿ ಬೌಲಿಂಗ್ ಮ್ಯಾಜಿಕ್‌ಗೆ ಬೆರಗಾದ ಕೆಎಲ್ ರಾಹುಲ್; ಆರಂಭದಲ್ಲೇ ಕರ್ನಾಟಕಕ್ಕೆ ಸಂಕಷ್ಟ!

T20 World cup 2026: 'ಆಕ್ರಮಣಕಾರಿ ಶೈಲಿ ಮುಂದುವರಿಸಿ': ಜಿಂಬಾಬ್ವೆ ವಿರುದ್ಧದ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾಗೆ ಅನಿಲ್ ಕುಂಬ್ಳೆ ಎಚ್ಚರಿಕೆ

ರಿಯಲ್ ಲೈಫ್‌ನಲ್ಲೂ ಒಂದಾದ ರೀಲ್ ಜೋಡಿ: ತೆಲುಗು ಸಂಪ್ರದಾಯದಂತೆ ರಶ್ಮಿಕಾ–ವಿಜಯ್ ವಿವಾಹ, ಸಂಜೆ ಕೊಡವ ಸಂಪ್ರದಾಯದಲ್ಲಿ ಮತ್ತೊಂದು ಸಮಾರಂಭ

SCROLL FOR NEXT