ವಿರಾಟ್ ಕೊಹ್ಲಿ-ಹಾರ್ದಿಕ್ ಪಾಂಡ್ಯ
ನವದೆಹಲಿ: ಟೀಂ ಇಂಡಿಯಾದ ಯುವ ಕ್ರಿಕೆಟಿಗ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಮೇಲೆ ನಿರೀಕ್ಷೆಗಳು ಹೆಚ್ಚಿವೆ ಎಂದು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.
ಶ್ರೀಲಂಕಾದಲ್ಲಿ ಮಾತನಾಡಿದ ವಿರಾಟ್ ಕೊಹ್ಲಿ, ವಿದೇಶಗಳಲ್ಲಿ ಸರಣಿಗಳನ್ನು ಆಡುವಾಗ ಆಲ್ ರೌಂಡರ್ ಗಳು ಸಾಕಷ್ಟು ಸಮತೋಲನವನ್ನು ನೀಡುತ್ತಾರೆ. ನನ್ನು ಪ್ರಕಾರ ಹಾರ್ದಿಕ್ ಪಾಂಡ್ಯ ಅಂತಹ ಆಟಗಾರ ಎಂದು ಭಾವಿಸುತ್ತೇನೆ ಎಂದರು.
ಇಂಗ್ಲೆಂಡ್ ನ ಆಲ್ ರೌಂಡರ್ ಬೆನ್ ಸ್ಟೇಕ್ಸ್ ಅವರು ತಮ್ಮ ತಂಡಕ್ಕೆ ಏನು ಮಾಡಿದ್ದಾರೆ ಎಂದು ಹೇಳಬೇಕಿಲ್ಲ. ಅಂತಹ ಒಬ್ಬ ಆಲ್ ರೌಂಡರ್ ತಂಡದಲ್ಲಿದ್ದರೆ ತಂಡ ಸಮತೋಲನದಿಂದ ಇರುತ್ತದೆ. ಅಂತೆ ಹಾರ್ದಿಕ್ ಪಾಂಡ್ಯ ಟೀಂ ಇಂಡಿಯಾದ ಅತ್ಯುತ್ತಮ ಆಲ್ ರೌಂಡರ್ ಆಗುವುದರಿಂದ ಸಂದೇಹವೆ ಇಲ್ಲ ಎಂದು ವಿರಾಟ್ ಕೊಹ್ಲಿ ಭರವಸೆ ವ್ಯಕ್ತಪಡಿಸಿದ್ದಾರೆ.
ಗಾಲೆಯಲ್ಲಿ ನಡೆದ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ಎಂಟನೇ ಆಟಗಾರನಾಗಿ ಕಣಕ್ಕಿಳಿದ ಪಾಂಡ್ಯ 49 ಎಸೆತೆಗಳಲ್ಲಿ 50 ರನ್ ಸಿಡಿಸಿದ್ದರು. ಇನ್ನು ಕ್ಯಾಂಡಿಯಲ್ಲಿ ನಡೆದಿದ್ದ ಟೆಸ್ಟ್ ಪಂದ್ಯದಲ್ಲಿ ಪಾಂಡ್ಯ ಚೊಚ್ಚಲ ಶತಕ ಸಿಡಿಸಿದ್ದರು. ಇನ್ನು ಬೌಲಿಂಗ್ ವಿಭಾಗದಲ್ಲೂ ಹಾರ್ದಿಕ್ ಪಾಂಡ್ಯ ವಿಕೆಟ್ ಗಳನ್ನು ಪಡೆಯುತ್ತಿದ್ದು ಉತ್ತಮ ಆಲ್ ರೌಂಡರ್ ಆಗಿ ಹೆಸರು ಸಂಪಾದಿಸಲಿದ್ದಾರೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics