ಎಂಎಸ್ಕೆ ಪ್ರಸಾದ್-ಎಂಎಸ್ ಧೋನಿ
ಟೀಂ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿ 36ರ ಹರೆಯದಲ್ಲೂ ಉತ್ತಮ ಪ್ರದರ್ಶನ ನೀಡುವ ಮೂಲಕ ತಂಡಕ್ಕೆ ಆಸರೆಯಾಗಿದ್ದಾರೆ.
ಇಂತಹ ಧೋನಿ ಈ ಹಿಂದೆ ಗಾಯಗೊಂಡಿದ್ದ ಸಂದರ್ಭದಲ್ಲಿ ಭಾರತ ತಂಡದ ಆಟಗಾರರ ಆಯ್ಕೆ ಸಮಿತಿ ಮುಖ್ಯಸ್ಥ ಎಂಎಸ್ಕೆ ಪ್ರಸಾದ್ ಅವರ ಬಳಿ ನಾನು ಪಾಕಿಸ್ತಾನ ವಿರುದ್ಧ ಬೇಕಾದರೇ ಒಂಟಿ ಕಾಲಲ್ಲಿ ಆಡಲು ಸಿದ್ಧ ಎಂದು ಹೇಳಿದ್ದರು ಎಂದು ಧೋನಿಯ ಬದ್ಧತೆ ಕುರಿತು ಪ್ರಸಾದ್ ಹೇಳಿಕೊಂಡಿದ್ದಾರೆ.
ಪಾಕಿಸ್ತಾನ ವಿರುದ್ಧದ ಏಷ್ಯಾ ಕಪ್ ಟೂರ್ನಿಯ ವೇಳೆ ಮಹೇಂದ್ರ ಸಿಂಗ್ ಧೋನಿ ಅವರು ಜಿಮ್ ನಲ್ಲಿ ಕಸರತ್ತು ನಡೆಸುತ್ತಿದ್ದಾಗ ಅತೀ ಬಾರದ ಸಲಕರಣೆಯನ್ನು ಎತ್ತುತ್ತಿದ್ದರು. ಆಗ ಅವರಿಗೆ ಅತೀವ ನೋವು ಕಾಣಿಸಿಕೊಂಡು ಹಾಗೆ ಕುಸಿದು ಬಿದ್ದರು. ಅದೃಷ್ಟವಶಾತ್ ಅವರ ಮೇಲೆ ಬಾರದ ಸಲಕರಣೆಗಳು ಬಿದ್ದಿರಲಿಲ್ಲ. ಆದರೆ ಅವರಿಗೆ ನಡೆಯಲು ಸಾಧ್ಯವಾಗದೆ ಕೂಗಿಕೊಂಡರು. ಕೂಡಲೇ ವೈದ್ಯಕೀಯ ಸಿಬ್ಬಂದಿ ಬಂದು ಸ್ಟ್ರೇಚರ್ ನಲ್ಲಿ ಕರೆದುಕೊಂಡು ಹೋಗಿ ಚಿಕಿತ್ಸೆ ನೀಡಿದರು.
ಸುದ್ದಿ ತಿಳಿದ ಕೂಡಲೇ ನಾನು ಡಾಕಾಗೆ ತೆರಳಿ ಧೋನಿ ತಂಗಿದ್ದ ರೂಂಗೆ ಹೋಗಿ ಆರೋಗ್ಯ ವಿಚಾರಿಸಿದೆ. ಆಗ ಧೋನಿ ಚಿಂತಿಸಬೇಡಿ ಎಂಎಸ್ಕೆ ಬಾಯ್ ಎಂದು ಹೇಳಿದ್ದರು. ಅಂದು ಪಾಕ್ ವಿರುದ್ಧ ನಡೆಯಬೇಕಿದ್ದ ಪಂದ್ಯ ನಿರ್ಣಾಯಕ ಪಂದ್ಯವಾಗಿದ್ದರಿಂದ ನಾವೆಲ್ಲಾ ಚಿಂತೆಯಲ್ಲಿ ಬಿದ್ದಿದ್ದೇವೆ. ಆ ಕೂಡಲೇ ನಾನು ಆಯ್ಕೆ ಸಮಿತಿಯ ಮುಖ್ಯಸ್ಥರಾಗಿದ್ದ ಸಂದೀಪ್ ಪಾಟೀಲ್ ಅವರಿಗೆ ಕರೆ ಮಾಡಿ ವಿಷಯ ತಿಳಿಸಿದೆ. ಆಗ ಅವರು ಧೋನಿ ಬದಲಿಗೆ ಆಡಲು ಪಾರ್ಥಿವ್ ಪಟೇಲ್ ರನ್ನು ಕಳುಹಿಸಿದರು.
ಇದಾದ ಮಾರನೇ ದಿನ ನಾನು ಧೋನಿ ರೂಂಗೆ ತೆರಳಿದ್ದೇ ಆಗ ಅವರು ರೂಂನಲ್ಲಿ ಮಲಗಿರಲಿಲ್ಲ. ಈಜುಕೋಳದ ಬಳಿ ನಡೆಯಲು ಯತ್ನಿಸುತ್ತಿದ್ದರು. ಆಗ ನಾನು ಈಗ ಹೇಗಿದೆ ಆರೋಗ್ಯ ಎಂದು ವಿಚಾರಿಸಿದೆ. ಅದಕ್ಕೆ ಅವರು ನಾನು ಚನ್ನಾಗಿಯೇ ಇದ್ದೇನೆ. ನಡೆದಾಡಲು ಕಷ್ಟವಾದರೇ ಪಾಕಿಸ್ತಾನ ವಿರುದ್ಧ ಒಂಟಿ ಕಾಲಿನಲ್ಲಿ ಬೇಕಾದರೂ ಆಡಲು ನಾನು ಸಿದ್ಧ ಎಂದು ಹೇಳಿದ್ದರು ಎಂದು ಎಂಎಸ್ಕೆ ಪ್ರಸಾದ್ ಈ ಹಿಂದಿನ ಘಟನೆಯನ್ನು ಹೇಳಿಕೊಂಡಿದ್ದಾರೆ.