ಸುರೇಶ್ ರೈನಾ 
ಕ್ರಿಕೆಟ್

ದುಲೀಪ್ ಟ್ರೋಫಿ ವೇಳಾ ಪಟ್ಟಿ ಪ್ರಕಟ: ರೈನಾಗೆ ಒಲಿದ ನಾಯಕ ಪಟ್ಟ

ದುಲೀಪ್ ಟ್ರೋಫಿ ಕ್ರಿಕೆಟ್ ವೇಳಾಪಟ್ಟಿ ಪ್ರಕಟವಾಗಿದೆ. ಟೂರ್ನಿಯಲ್ಲಿ ಆಡಲಿರುವ ಇಂಡಿಯಾ ಬ್ಲೂ ತಂಡಕ್ಕೆ ಭಾರತ ತಂಡದ ಕ್ರಿಕೆಟಿಗ ಸುರೇಶ್ ರೈನಾ ನಾಯಕರಾಗಿದ್ದಾರೆ..

ನವದೆಹಲಿ: ದುಲೀಪ್ ಟ್ರೋಫಿ ಕ್ರಿಕೆಟ್ ವೇಳಾಪಟ್ಟಿ ಪ್ರಕಟವಾಗಿದೆ. ಟೂರ್ನಿಯಲ್ಲಿ ಆಡಲಿರುವ ಇಂಡಿಯಾ ಬ್ಲೂ ತಂಡಕ್ಕೆ ಭಾರತ ತಂಡದ ಕ್ರಿಕೆಟಿಗ ಸುರೇಶ್ ರೈನಾ ನಾಯಕರಾಗಿದ್ದಾರೆ..
ಸೆ.7ರಿಂದ 29ರವರೆಗೆ ದುಲೀಪ್‌ ಟ್ರೋಫಿ ಟೂರ್ನಿಯ ಪಂದ್ಯಗಳು ಕಾನ್ಪುರ ಹಾಗೂ ಲಖನೌದಲ್ಲಿ ನಡೆಯಲಿವೆ. ಎರಡೂ ಸ್ಥಳಗಳಲ್ಲಿ ಕ್ರಮವಾಗಿ ಎರಡು ಪಂದ್ಯಗಳು ಆಯೋಜನೆಗೊಂಡಿವೆ.
2015ರ ಅಕ್ಟೋಬರ್‌ ನಿಂದಲೂ ಸುರೇಶ್ ರೈನಾ ಭಾರತದ ಏಕದಿನ ತಂಡದಿಂದ ಹೊರಗುಳಿದಿದ್ದಾರೆ. ಇದೀಗ ದುಲೀಪ್ ಟ್ರೋಫಿಯಲ್ಲಿ ನಾಯಕ ಸ್ಥಾನ ನಿಭಾಯಿಸುವ ಮೂಲಕ ಭಾರತ ತಂಡಕ್ಕೆ ಮರಳುವ ಪ್ರಯತ್ನ ಮಾಡುತ್ತಿದ್ದಾರೆ ಎನ್ನಲಾಗಿದೆ. ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯಲ್ಲಿಯೂ ರೈನಾ ಗೆ ಸ್ಥಾನ ಸಿಕ್ಕಿರಲಿಲ್ಲ. ಆಸ್ಟ್ರೇಲಿಯಾ ವಿರುದ್ಧ ಸೆ.17ರಿಂದ ಆರಂಭವಾಗುವ ಏಕದಿನ ಸರಣಿಯಲ್ಲಿ ಸ್ಥಾನ ಗಿಟ್ಟಿಸಲು ರೈನಾಗೆ ಇದು ಉತ್ತಮ ಅವಕಾಶ ಎನ್ನಲಾಗಿದೆ.
ಇನ್ನು ಗಾಯದ ಸಮಸ್ಯೆಯಿಂದ ಭಾರತ ತಂಡದಲ್ಲಿ ಅವಕಾಶ ಪಡೆಯದ ಮುರಳಿ ವಿಜಯ್ ಸಹ ಇಲ್ಲಿ ಅವಕಾಶ ಗಿಟ್ಟಿಸಿದ್ದಾರೆ. ವಿಜಯ್ ಇಂಡಿಯಾ ಗ್ರೀನ್ ತಂಡದಲ್ಲಿ ಸ್ಥಾನ ಗಿಟ್ಟಿಸಿದ್ದಾರೆ. ಈ ತಂಡದ ಸಾರಥ್ಯವನ್ನು ಪಾರ್ಥಿವ್ ಪಟೇಲ್ ವಹಿಸಲಿದ್ದಾರೆ. ಗಾಲೆನಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಆಡಿದ್ದ ಅಭಿನವ್ ಮುಕುಂದ್ ಇಂಡಿಯಾ ರೆಡ್ ತಂಡದ ನಾಯಕರಾಗಿದ್ದಾರೆ.
ಭಾರತ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಮುಂದಾಳತ್ವದಲ್ಲಿ ದುಲೀಪ್ ಟ್ರೋಫಿ ವೇಳಾಪಟ್ಟಿ ಹಾಗೂ ತಂಡವನ್ನು ಅಂತಿಮಗೊಳಿಸಲಾಗಿದೆ. ಐದು ದಿನಗಳ ಫೈನಲ್ ಪಂದ್ಯ ಸೆಪ್ಟೆಂಬರ್‌ 25ರಿಂದ 29ರವರೆಗೆ ಉತ್ತರಪ್ರದೇಶದಲ್ಲಿ ನಡೆಯಲಿದೆ. ಸರಣಿಯಲ್ಲಿ ಒಟ್ಟು 45 ಕ್ರಿಕೆಟಿಗರು ಆಡಲಿದ್ದಾರೆ.
ಇಂಡಿಯಾ ರೆಡ್‌: ಅಭಿನವ್ ಮುಕುಂದ್ (ನಾಯಕ), ಪ್ರಿಯಾಂಕ್ ಪಾಂಚಲ್‌, ಸುದೀಪ್ ಚಟರ್ಜಿ, ಇಶಾಂಕ್ ಜಗ್ಗಿ, ಅಂಬಟಿ ರಾಯುಡು, ದಿನೇಶ್ ಕಾರ್ತಿಕ್‌, ರಿಷಭ್ ಪಂತ್‌, ಬಾಬಾ ಇಂದ್ರಜಿತ್‌, ಕೆ.ಗೌತಮ್, ಕರ್ಣ ಶರ್ಮಾ, ಬೆಸಿಲ್ ಥಂಪಿ, ಧವಳ್‌ ಕುಲಕರ್ಣಿ, ಅಶೋಕ್ ದಿಂಡಾ, ರಾಹುಲ್ ಸಿಂಗ್‌, ಸಿ.ವಿ ಮಿಲಿಂದ್.
ಇಂಡಿಯಾ ಗ್ರೀನ್‌: ಮುರಳಿ ವಿಜಯ್‌, ಆರ್. ಸಮರ್ಥ್‌, ಪಿ. ಚೋಪ್ರಾ, ಶ್ರೇಯಸ್ ಅಯ್ಯರ್, ಕರುಣ್ ನಾಯರ್, ಅಂಕಿತ್ ಭಾವ್ನೆ, ಪಾರ್ಥಿವ್ ಪಟೇಲ್ (ನಾಯಕ), ಶಹಬಾಜ್‌ ನದೀಮ್‌, ಪರ್ವೇಜ್‌ ರಸೂಲ್‌, ನವೀಪ್ ಸೈನಿ, ಮೊಹಮ್ಮದ್ ಸಿರಾಜ್‌, ಸಿದ್ದಾರ್ಥ್ ಕೌಲ್‌, ಮಯಂಕ್ ಡಾಗರ್‌, ನಿತಿನ್ ಸೈನಿ, ಅಂಕಿತ್ ಚೌಧರಿ.
ಇಂಡಿಯಾ ಬ್ಲೂ: ಸುರೇಶ್ ರೈನಾ (ನಾಯಕ), ಸುಮಿತ್ ಗೋಯಲ್‌, ಕೆ.ಎಸ್.ಭರತ್. ಎ.ಆರ್ ಈಶ್ವರನ್‌, ಮನೋಜ್ ತಿವಾರಿ, ದೀಪಕ್ ಹೂಡಾ, ವಿಜಯ್ ಶಂಕರ್,  ಇಶಾನ್ ಕಿಶನ್, ಜಯಂತ್ ಯಾದವ್‌, ಭಾರ್ಗವ್ ಭಟ್, ಕೆ.ಎಮ್ ಗಾಂಧಿ, ಇಶಾಂತ್ ಶರ್ಮಾ, ಅಂಕಿತ್ ರಜಪೂತ್, ಎಸ್.ಕಾಮತ್‌, ಜಯದೇವ್ ಉನದ್ಕತ್‌.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಯುದ್ಧ ತೀವ್ರ: ಪಾಕಿಸ್ತಾನದ ಏರ್ ಸ್ಟ್ರೈಕ್ ಗೆ ಅಫ್ಘಾನಿಸ್ತಾನದಿಂದ ಕ್ಷಿಪಣಿ ದಾಳಿ ಉತ್ತರ

ಇತಿಹಾಸ ಬರೆದ Sherry Singh, 48 ವರ್ಷಗಳಲ್ಲಿ ಮೊದಲ ಬಾರಿಗೆ ಭಾರತಕ್ಕೆ 'ಮಿಸ್ ಯೂನಿವರ್ಸ್' ಕಿರೀಟ!

ಪಶ್ಚಿಮ ಬಂಗಾಳ ವೈದ್ಯಕೀಯ ವಿದ್ಯಾರ್ಥಿನಿ ಗ್ಯಾಂಗ್ ರೇಪ್ ಕೇಸ್: ಮೂವರ ಬಂಧನ

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

SCROLL FOR NEXT