ನವದೆಹಲಿ: ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ಮತ್ತೊಂದು ವಿಶ್ವ ದಾಖಲೆಯನ್ನು ಮಾಡಿದ್ದಾರೆ.
ಏಕದಿನ ಪಂದ್ಯದಲ್ಲಿ 73ನೇ ಬಾರಿ ಅಜೇಯರಾಗುಳಿಯುವ ಮೂಲಕ ನೂತನ ವಿಶ್ವದಾಖಲೆ ನಿರ್ಮಿಸಿದ್ದಾರೆ. ಈ ಹಿಂದೆ ಶಾನ್ ಪೊಲಾಕ್, ಚಾಮಿಂಡಾ ವಾಸ್ ಜತೆಗೆ ವಿಶ್ವದಾಖಲೆ ಹಂಚಿಕೊಂಡಿದ್ದರು.
ಇನ್ನು ಶ್ರೀಲಂಕಾ ವಿರುದ್ಧದ 4ನೇ ಪಂದ್ಯದಲ್ಲಿ ಮೈದಾನಕ್ಕಿಳಿದು ತಮ್ಮ ವೃತ್ತಿ ಜೀವನದ 300ನೇ ಪಂದ್ಯವಾಡಿದರು. ಆ ಮೂಲಕ ಈ ಸಾಧನೆ ಮಾಡಿದ ಭಾರತದ 5ನೇ ಆಟಗಾರನಾಗಿದ್ದಾರೆ.
300ನೇ ಪಂದ್ಯ ಆಡಿದ ಧೋನಿಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಪ್ಲಾಟಿನಮ್ ಬ್ಯಾಟ್ ಕೊಡುಗೆ ನೀಡಿತು.