ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಆವರಿಸಿಕೊಂಡಿರುವ ದಟ್ಟ ಮಂಜಿನಿಂದ ಕೂಡಿದ ಹೊಗೆ ಹಾಗೂ ಅಪಾಯಕಾರಿ ದೂಳಿನ ಕಣಗಳು ಅಲ್ಲಿನ ನಾಗರೀಕರ ನಿದ್ದೆಗೆಡಿಸಿತ್ತು. ಇದೀಗ ಲಂಕಾ ವಿರುದ್ಧದ ಮೂರನೇ ಟೆಸ್ಟ್ ಪಂದ್ಯ ದೆಹಲಿಯಲ್ಲಿ ನಡೆಯುತ್ತಿದ್ದು ಅಲ್ಲಿನ ಮಾಲಿನ್ಯಕ್ಕೆ ಲಂಕಾ ಆಟಗಾರರು ತತ್ತರಿಸಿದ್ದಾರೆ.
ದೆಹಲಿಯ ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ಲಂಕಾ ವಿರುದ್ಧದ ಮೂರನೇ ಟೆಸ್ಟ್ ಪಂದ್ಯ ನಡೆಯುತ್ತಿದ್ದು ಲಂಕಾ ಆಟಗಾರರು ಮುಖಕ್ಕೆ ಮಾಸ್ಕ್ ಹಾಕಿಕೊಂಡು ಆಡುತ್ತಿದ್ದಾರೆ. ಇದೇ ವೇಳೆ ಬೌಲರ್ ಗಳು ಉಸಿರಾಟ ಸಮಸ್ಯೆ ಎದುರಿಸುತ್ತಿದ್ದು ಪಂದ್ಯವನ್ನು ನಿಲ್ಲಿಸುವಂತೆ ಅಂಪೈರ್ ಗಳಿಗೆ ಮನವಿ ಮಾಡಿದರು.
ಮೈದಾನದಲ್ಲಿದ್ದ ಅಂಪೈರ್ ಗಳು ಉಭಯ ತಂಡದ ನಾಯಕರನ್ನು ಸಮಲೋಚನೆ ನಡೆಸಿದರು. ಇದರಿಂದಾಗಿ ಪಂದ್ಯ 16 ನಿಮಿಷಗಳ ಕಾಲ ನಿಲ್ಲಿಸಲಾಗಿತ್ತು. ನಂತರ ಪಂದ್ಯ ಆರಂಭವಾದರೂ ಘಮಗೆ ಉಸಿರಾಟ ತೊಂದರೆಯಿಂದಾಗಿ ಪೆಲಿವಿಲಿಯನ್ ಸೇರಿದರು.
ದೆಹಲಿಯಲ್ಲಿನ ಮಾಲಿನ್ಯ ಕ್ರಿಕೆಟ್ ಪಂದ್ಯದ ಮೇಲೂ ಪರಿಣಾಮ ಬೀರಿದೆ. ಇಂದು ಭಾನುವಾರವಾದ್ದರಿಂದ ಸಾವಿರಾರೂ ಮಂದಿ ಕ್ರೀಡಾಂಗಣದಲ್ಲಿ ನೆರದಿದ್ದಾರೆ.