ಕ್ರಿಕೆಟ್

ಲಂಕಾ ವಿರುದ್ಧ ಏಕದಿನ ಸರಣಿ ಗೆದ್ದರೆ ಭಾರತಕ್ಕೆ ಮತ್ತೆ ಅಗ್ರ ಸ್ಥಾನ!

Srinivasamurthy VN
ನವದೆಹಲಿ: ಏಕದಿನ ಕ್ರಿಕೆಟ್ ರ್ಯಾಂಕಿಂಗ್ ನಲ್ಲಿ ಅಗ್ರಸ್ಥಾನಕ್ಕಾಗಿ ದಕ್ಷಿಣ ಆಫ್ರಿಕಾ ತಂಡದಿಂದ ತೀವ್ರ ಪೈಪೋಟಿ ಎದುರಿಸುತ್ತಿರುವ ಟೀಂ ಇಂಡಿಯಾ ಮತ್ತೆ ಅಗ್ರ ಸ್ಥಾನಕ್ಕೇರುವ ಅವಕಾಶ ಲಭಿಸಿದೆ.
ಶ್ರೀಲಂಕಾ ವಿರುದ್ಧ ನಾಳೆಯಿಂದ ಆರಂಭವಾಗಲಿರುವ 3 ಪಂದ್ಯಗಳ ಏಕದಿನ ಸರಣಿಯಲ್ಲಿ ಭಾರತ ಗೆಲುವು ಸಾಧಿಸಿದರೆ ಭಾರತ ಅಗ್ರ ಸ್ಥಾನಕ್ಕೇರಲಿದೆ. ಪ್ರಸ್ತುತ ರ್ಯಾಂಕಿಂಗ್ ಪಟ್ಟಿಯಲ್ಲಿ ಭಾರತ ಎರಡನೇ ಸ್ಥಾನದಲ್ಲಿದ್ದು,  ಭಾರತದ ಖಾತೆಯಲ್ಲಿ 120 ಅಂಕಗಳಿವೆ. ಅಗ್ರ ಸ್ಥಾನದಲ್ಲಿರುವ ದಕ್ಷಿಣ ಆಫ್ರಿಕಾ ಕೂಡ 120 ಅಂಕಗಳನ್ನು ಹೊಂದಿದ್ದು, ರೇಟಿಂಗ್ಸ್ ಆಧಾರದಲ್ಲಿ ಅಗ್ರ ಸ್ಥಾನದಲ್ಲಿ ಮುಂದುವರೆದಿದೆ, ನಾಳಿನ ಪಂದ್ಯವನ್ನು ಭಾರತ ಗೆದ್ದರೆ ಆಗ ಭಾರತದ  ಖಾತೆಗೆ 1 ಅಂಕಗ ಸೇರ್ಪಡೆಯಾಗಲಿದ್ದು, ಆಗ ಭಾರತ ಬಳಿ 121 ಅಂಕಗಳ ಮೂಲಕ ಅಗ್ರ ಸ್ಥಾನಕ್ಕೇರಲಿದೆ. 
ಆದರೆ ಈ ಮೂರು ಪಂದ್ಯಗಳ ಸರಣಿಯಲ್ಲಿ ಭಾರತ ಒಂದೂ ಪಂದ್ಯವನ್ನೂ ಸೋಲುವಂತಿಲ್ಲ. ಪಂದ್ಯ ಸೋತರೆ ಭಾರತದ ರೇಟಿಂಗ್ಸ್ ಕುಸಿಯಲಿದ್ದು, 3 ಪಂದ್ಯಗಳ ಸರಣಿಯನ್ನು ಭಾರತ 2-1 ಅಂತರದಲ್ಲಿ ಜಯಿಸಿದರೂ ಭಾರತ 2ನೇ  ಸ್ಥಾನದಲ್ಲೇ ಮುಂದುವರೆಯಬೇಕಾಗುತ್ತದೆ. ಹೀಗಾಗಿ ಭಾರತ ಮೂರು ಪಂದ್ಯಗಳ ಸರಣಿಯಲ್ಲಿ 2-0 ಅಥವಾ 3-0 ಅಂತರದಲ್ಲಿ ಜಯಿಸಬೇಕಿದೆ.
ಇನ್ನು ಶ್ರೀಲಂಕಾ ತಂಡದ ಪರಿಸ್ಥಿತಿ ಹೀಗಿಲ್ಲ. ಲಂಕಾ ತಂಡ ಸರಣಿಯನ್ನೂ ಸೋತರೂ ಗೆದ್ದರೂ ಅದರ ರ್ಯಾಂಕಿಂಗ್ ನಲ್ಲಿ ಯಾವುದೇ ಬದಲಾವಣೆಯಾಗುವುದಿಲ್ಲ. ಕಾರಣ ಲಂಕಾ 83 ಅಂಕಗಳೊಂದಿಗೆ 8ನೇ ಸ್ಥಾನದಲ್ಲಿದ್ದು, 3-0  ಅಂತರದಲ್ಲಿ ಭಾರತದ ವಿರುದ್ಧ ಜಯಿಸಿದರೆ ಅದರ ಅಂಕಗಳಿಕೆ 87ಕ್ಕೆ ಏರಿಕೆಯಾಗುತ್ತದೆ. ಆದರೂ ಲಂಕಾ ತಂಡದ ಸ್ಥಾನ ಬದಲಾಗದು. ಕಾರಣ 7ನೇ ಸ್ಥಾನದಲ್ಲಿರುವ ಬಾಂಗ್ಲಾದೇಶ 92 ಅಂಕಗಳನ್ನು ಹೊಂದಿದೆ. ಹೀಗಾಗಿ ಲಂಕಾ  ತಂಡಕ್ಕೆ ಈ ಸರಣಿ ಗೆಲುವಷ್ಟೇ ಮುಖ್ಯವಾಗುತ್ತದೆ. ಕಾರಣ ಈ ಹಿಂದೆ ಭಾರತ ತಂಡ ಶ್ರೀಲಂಕಾ ಪ್ರವಾಸ ಕೈಗೊಂಡಿದ್ದ ವೇಳೆ ಆ ತಂಡವನ್ನು ವೈಟ್ ವಾಶ್ ಮಾಡಿತ್ತು.
ಆ ಸರಣಿ ಸೋಲಿನ ಸೇಡು ತೀರಿಸಿಕೊಳ್ಳಲ್ಲಷ್ಟೇ ಲಂಕಾ ತಂಡಕ್ಕೆ ಈ ಸರಣಿ ಗೆಲುವು ಅನಿವಾರ್ಯ... 
SCROLL FOR NEXT