'ಗೋಡೆ' ಖ್ಯಾತಿಯ ರಾಹುಲ್ ದ್ರಾವಿಡ್ ಮಾತಿಗೆ ಮನಸೋತ ಜಾನ್ ಸೀನಾ
ಡಬ್ಲ್ಯೂಡಬ್ಲ್ಯೂಇ ಖ್ಯಾತ ರೆಸ್ಲರ್ ಜಾನ್ ಸೆನಾಗೆ ಇಡೀ ಜಗತ್ತಿನಲ್ಲಿ ದೊಡ್ಡ ಅಭಿಮಾನಿಗಳ ಬಳಗ ಇದೆ. ಅಂತಹ ಜಾನ್ ಸಿನಾ ಅವರು ಟೀಂ ಇಂಡಿಯಾದ ಮಾಜಿ...
ನವದೆಹಲಿ: ಡಬ್ಲ್ಯೂಡಬ್ಲ್ಯೂಇ ಖ್ಯಾತ ರೆಸ್ಲರ್ ಜಾನ್ ಸೆನಾಗೆ ಇಡೀ ಜಗತ್ತಿನಲ್ಲಿ ದೊಡ್ಡ ಅಭಿಮಾನಿಗಳ ಬಳಗ ಇದೆ. ಅಂತಹ ಜಾನ್ ಸಿನಾ ಅವರು ಟೀಂ ಇಂಡಿಯಾದ ಮಾಜಿ ನಾಯಕ 'ಗೋಡೆ' ಖ್ಯಾತಿಯ ರಾಹುಲ್ ದ್ರಾವಿಡ್ ಅವರ ಮಾತನ್ನು ಹಂಚಿಕೊಳ್ಳುವ ಮೂಲಕ ಕ್ರಿಕೆಟ್ ಅಭಿಮಾನಿಗಳ ಮೆಚ್ಚೆಗೆಗೆ ಪಾತ್ರರಾಗಿದ್ದಾರೆ.
ಯು ಡೋಂಟ್ ಪ್ಲೇ ಫಾರ್ ರಿವೇಂಜ್. ಯು ಪ್ಲೇ ಫಾರ್ ರೆಸ್ಪೆಕ್ಟ್ ಅಂಡ್ ಪ್ರೈಡ್(ಸೇಡಿಗಾಗಿ ನೀವು ಆಡಬೇಕಿಲ್ಲ. ಗೌರವ ಹಾಗೂ ಹೆಮ್ಮೆಯ ಸಲುವಾಗಿ ಆಟವಾಡಿ) ಎಂದು ದ್ರಾವಿಡ್ ತಮ್ಮ ಇನ್ಸ್ ಟಾಗ್ರಾಮ್ ಪೋಸ್ಟ್ ನಲ್ಲಿ ಬರೆದುಕೊಂಡಿದ್ದರು. ಈ ಮಾತಿಗೆ ತಲೆ ಬಾಗಿರುವ ಜಾನ್ ಸಿನಾ ಪೋಸ್ಟ್ ಮಾಡಿದ್ದಾರೆ.
ದೆಹಲಿಯಲ್ಲಿ ಭಾನುವಾರ ಡಬ್ಲ್ಯೂಡಬ್ಲ್ಯೂಇ ಲೈವ್ ಇವೆಂಟ್ ನಲ್ಲಿ ಟ್ರಿಪಲ್ ಎಚ್ ಜತೆ ಮುಖಾಮುಖಿ ನಡೆಸಿದ್ದ ಜಾನ್ ಸೆನಾ ಗೆಲುವು ಸಾಧಿಸಿದ್ದರು. ದ್ರಾವಿಡ್ ರ ಮಾತನ್ನು ಶೇರ್ ಮಾಡಿದ್ದಕ್ಕೆ ಜಾನ್ ಸೆನಾರ ಪೋಸ್ಟ್ ಗೆ 1.30 ಲಕ್ಷಕ್ಕೂ ಅಧಿಕ ಲೈಕ್ಸ್ ಹಾಗೂ ಸಾವಿರಾರು ಕಮೆಂಟ್ ಗಳು ಬಂದಿವೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.