ನವದೆಹಲಿ: ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅಥವಾ ವೆಸ್ಟ್ ಇಂಡೀಸ್ ನ ಸ್ಫೋಟಕ ಬ್ಯಾಟ್ಸ್ ಮನ್ ಕ್ರಿಸ್ ಗೇಯ್ಲ್‌ರಂತೆ ಬಲಶಾಲಿಯಲ್ಲ ಅದಕ್ಕಾಗಿ ಸಮಯಕ್ಕೆ ತಕ್ಕಂತೆ ಆಡುತ್ತೇನೆ ಎಂದು ಟೀಂ ಇಂಡಿಯಾ ಸ್ಫೋಟಕ ಬ್ಯಾಟ್ಸ್ ಮನ್ ರೋಹಿತ್ ಶರ್ಮಾ ಹೇಳಿದ್ದಾರೆ.
ಮೊಹಾಲಿಯಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಎರಡನೇ ಪಂದ್ಯದಲ್ಲಿ 3ನೇ ದ್ವಿಶತಕ ಬಾರಿಸಿ ವಿಶ್ವ ದಾಖಲೆ ಬರೆದಿದ್ದಾರೆ. ಏಕದಿನ ಪಂದ್ಯದಲ್ಲಿ ಮೂರು ಮೂರು ದ್ವಿಶತಕ ಬಾರಿಸುವುದು ಎಂದರೇ ಒಂದು ಹಂತದಲ್ಲಿ ಯೋಜಿಸಲಾಗದಂತಹ ಒಂದು ಸಾಧನೆ ಮಾಡಿದ್ದಾರೆ.
ನಾನು ಎಂಎಸ್ ಧೋನಿ, ಎಬಿಡಿ ವಿಲಿಯರ್ಸ್ ಅಥವಾ ಕ್ರಿಸ್ ಗೇಯ್ಲ್ ರಂತೆ ಬಲಶಾಲಿಯಲ್ಲ. ಹೀಗಾಗಿ ಸಮಯಕ್ಕೆ ತಕ್ಕಂತೆ. ಚೆಂಡುಗಳ ವೇಗವನ್ನು ಗುರುತಿಸಿ ಲೈನ್ ಅಂಡ್ ಲೆನ್ಥ್ ಗೆ ತಕ್ಕಂತೆ ಮೈದಾನದಲ್ಲಿ ಆಟವಾಡಬೇಕು ಎಂದು ಹೇಳಿದ್ದಾರೆ.
ನಾನು ಮೊದಲಿಗೆ ಪರಿಸ್ಥಿತಿಯನ್ನು ಗುರುತಿಸುತ್ತೇನೆ. ನೀವು ನನ್ನ ಮೂರು ದ್ವಿಶತಕಗಳನ್ನು ಗಮನಿಸಿ ನನ್ನ ಬ್ಯಾಟಿಂಗ್ನಲ್ಲಿ ಸಾಮ್ಯತೆ ಇರುತ್ತದೆ. ನಾನು ನಿಧಾನವಾಗಿ ಬ್ಯಾಟಿಂಗ್ ಆರಂಭಿಸಿದರೂ ನಂತರ ನಾನು ವಿಜೃಂಭಿಸುತ್ತೇನೆ ಎಂದು ಹೇಳಿದ್ದಾರೆ.
ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ತಂಡದ ನಾಯಕತ್ವ ವಹಿಸಿಕೊಂಡಿರುವ ರೋಹಿತ್ ಶರ್ಮಾ ಲಂಕಾ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಅಬ್ಬರಿಸಿದ್ದರು. 153 ಎಸೆತದಲ್ಲಿ 12 ಸಿಕ್ಸರ್, 13 ಬೌಂಡರಿ ಸೇರಿದಂತೆ ಅಜೇಯ 208 ರನ್ ಸಿಡಿಸಿದರು. ಮೊದಲ 100 ರನ್ ಬಾರಿಸಲು 115 ಎಸತೆಗಳನ್ನು ತೆಗೆದುಕೊಂಡಿದ್ದ ರೋಹಿತ್ ಶರ್ಮಾ ನಂತರದ ಶತಕವನ್ನು ಕೇವಲ 36 ಎಸೆತಗಳಲ್ಲಿ ಸಿಡಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics