ಪರ್ತ್: ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ನಡುವೆ ನಡೆಯುತ್ತಿರುವ ಪ್ರತಿಷ್ಠಿತ ಆಷಸ್ ಕ್ರಿಕೆಟ್ ಸರಣಿಯನ್ನು ಆಸ್ಟ್ರೇಲಿಯಾ ಕೈವಶ ಮಾಡಿಕೊಂಡಿದೆ. ಮೂರನೇ ಟೆಸ್ಟ್ ಪಂದ್ಯದಲ್ಲಿ ಇನ್ನಿಂಗ್ಸ್ ಹಾಗೂ 41ರನ್ ನಿಂದ ಜಯ ಸಾಧಿಸಿದ ಆಸ್ಟ್ರೇಲಿಯಾ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 3-0 ಮುನ್ನಡೆ ಸಾಧಿಸಿದೆ.
ಮಳೆಯಿಂದಾಗಿ ಆಸ್ಟ್ರೇಲಿಯಾಗೆ ಪಂದ್ಯ್ ಗೆಲ್ಲುವಲ್ಲಿ ಆತಂಕ ಎದುರಾಗಿದ್ದರೂ ಸಹ ಜೋಶ್ ಹೇಜಲ್ ವುಡ್ ನೀಡಿದ ಉತ್ತಮ ಪ್ರದರ್ಶನದಿಂದ ಎದುರಾಳಿ ತಂಡಕ್ಕೆಾಘಾತ ನೀಡಿದ್ದರು. ಅವರು 48 ರನ್ ನೀಡಿ 5 ವಿಕೆಟ್ ಪಡೆಯುವ ಮೂಲಕ ಇಂಗ್ಲೆಂಡ್ ಎರಡನೇ ಇನ್ನಿಂಗ್ಸ್ ನಲ್ಲಿ 218 ರನ್ ಗೆ ಆಲ್ ಔಟ್ ಆಗುವಂತೆ ಮಾಡಿದ್ದರು.