ಲಂಡನ್ ನಲ್ಲಿ ನಲ್ಲಿ ಮಯಾಂಕ್ ಅಗರ್ವಾಲ್, ಆಶಿತಾ ಸೂದ್ ರೊಡನೆ ನಿಶ್ಚಿತಾರ್ಥ 
ಕ್ರಿಕೆಟ್

ಮಯಾಂಕ್ ಅಗರ್ವಾಲ್ ಗೆ ಕೂಡಿಬಂದ ಕಂಕಣ, ಲಂಡನ್ ನಲ್ಲಿ ಆಶಿತಾ ಸೂದ್ ರೊಡನೆ ನಿಶ್ಚಿತಾರ್ಥ

ರಣಜಿ ಟ್ರೋಫಿ ಸರಣಿಯಲ್ಲಿ ಅದ್ಭುತ ಆಟ ಪ್ರದರ್ಶನ ನೀಡಿರುವುದಲ್ಲದೆ ಸಾವಿರ ರನ್ ಕಲೆಹಾಕಿರುವ ಕರ್ನಾಟಕದ ಮಯಾಂಕ್‌ ಅಗರ್ವಾಲ್ ತಮ್ಮ ಗೆಳತಿ ಆಶಿತಾ ಸೂದ್‌ ಅವರೊಡನೆ ನಿಶ್ಚಿತಾರ್ಥ....

ಲಂಡನ್: ರಣಜಿ ಟ್ರೋಫಿ ಸರಣಿಯಲ್ಲಿ ಅದ್ಭುತ ಆಟ ಪ್ರದರ್ಶನ ನೀಡಿರುವುದಲ್ಲದೆ ಸಾವಿರ ರನ್ ಕಲೆಹಾಕಿರುವ ಕರ್ನಾಟಕದ ಮಯಾಂಕ್‌ ಅಗರ್ವಾಲ್ ತಮ್ಮ ಗೆಳತಿ ಆಶಿತಾ ಸೂದ್‌ ಅವರೊಡನೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂದು ಮಾದ್ಯಮದಲ್ಲಿ ವರದಿಯಾಗಿದೆ.
ತಮ್ಮ ಇನ್ಸ್‌ಟಾಗ್ರಾಂ ಖಾತೆಯಲ್ಲಿ ಈ ಸಂತಸವನ್ನು ಹಂಚಿಕೊಂಡಿರುವ ಮಯಾಂಕ್ ಟ್ವಿಟ್ಟರ್ ನಲ್ಲಿ ಸಹ ಬರೆದುಕೊಂಡಿದ್ದಾರೆ.
ಲಂಡನ್ ನ  ಥೇಮ್ಸ್ ನದಿಯ ತಪ್ಪಲಿನಲ್ಲಿ ಲಂಡನ್ ಐ ಟವರ್ ಬಳಿ ತಮ್ಮ ಗೆಳತಿ ಆಶಿತಾ ಸೂದ್‌ ಅವರ ಮುಂದೆ ಮಂಡಿಯೂರಿ ಕುಳಿತಿರುವ ಮಯಾಂಕ್ ಚಿತ್ರ ಇನ್ಸ್‌ಟಾಗ್ರಾಂ ಪೋಸ್ಟ್ ನಲ್ಲಿ ಕಾಣಬಹುದು. ಈ ವೇಳೆ ಮಯಾಂಕ್ ಗೆಳತಿಗೆ ತನ್ನನ್ನು ಮದುವೆಯಾಗುವಂತೆ ಪ್ರಪೋಸ್ ಮಾಡಿದ್ದಾಗಿ, ಆಶಿತಾ ಆ ಪ್ರೀತಿಯ ಕೋರಿಕೆಗೆ ಸಮ್ಮತಿ ಇತ್ತಿದ್ದಾರೆ.
"ಅವರು (ಆಶಿತಾ) ಯಸ್! ಎಂದು ಹೇಳಿದ್ದಾರೆ, ನಾನದನ್ನು ಪದಗಳಲ್ಲಿ ವರ್ಣಿಸಲಾರೆ. ಈ ಕ್ಷಣ ನಮ್ಮಿಬ್ಬರಿಗೆ ಸ್ಮರಣೀಯವಾಗಿದೆ" ಎಂದು ಮಯಾಂಕ್ ಟ್ವೀಟ್ ಮಾಡಿದ್ದಾರೆ.
ಕಳೆದ ಕೆಲ ವರ್ಷಗಳಿಂದ ಮಯಾಂಕ್ ಹಾಗೂ ಆಶಿತಾ ಪ್ರೀತಿಯಲ್ಲಿ ತೊಡಗಿದ್ದರು. ಇಬ್ಬರ ಕುಟುಂಬದವರೂ ಸಹ ಅವರ ವಿವಾಹಕ್ಕೆ ಒಪ್ಪಿಗೆ ಇತ್ತದ್ದರಿಂದ ಇದೀಗ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಭಟ್ಕಳ: ತಟ್ಟೆಹಕ್ಕಲು ನದಿಯಲ್ಲಿ ಮುಳುಗಿ ಒಂದೇ ಕುಟುಂಬದ 8 ಮಂದಿ ನೀರುಪಾಲು, ತಲಾ 5 ಲಕ್ಷ ಪರಿಹಾರ ಘೋಷಿಸಿದ ಸರ್ಕಾರ!

ಬೆಂಗಳೂರು: ಲೀಗ್ ಪಂದ್ಯದ ವೇಳೆ ಹೃದಯಾಘಾತದಿಂದ ಕರ್ನಾಟಕದ ಕ್ರಿಕೆಟಿಗ ನಿಧನ!

ಶೀಘ್ರದಲ್ಲೇ ವಿಶ್ವಕ್ಕೆ ಸಿಹಿ ಸುದ್ದಿ: ಅಮೆರಿಕಾ–ಇರಾನ್ ಸಂಘರ್ಷ ಅಂತ್ಯ ಸಾಧ್ಯತೆ, ಮಾರ್ಕೊ ರುಬಿಯೊ ಮಹತ್ವದ ಹೇಳಿಕೆ..!

KL Rahul ಆಯ್ತು ಇದೀಗ ರಿಷಬ್ ಪಂತ್ ನಾಯಕತ್ವಕ್ಕೆ ಕುತ್ತು?: LSG ಡೈರೆಕ್ಟರ್ ಟಾಮ್ ಮೂಡಿ ಸುಳಿವು!

ಅಮೆರಿಕದಲ್ಲಿ ಭಾರತೀಯರ ವಿರುದ್ಧ ಜನಾಂಗೀಯ ಹೇಳಿಕೆ: ಮಾರ್ಕೊ ರೂಬಿಯೊ ಹೇಳಿದ್ದೇನು?

SCROLL FOR NEXT