ಎಂಎಸ್ ಧೋನಿ 
ಕ್ರಿಕೆಟ್

ಕೂಲ್ ಕ್ಯಾಪ್ಟನ್ ಎಂದೇ ಖ್ಯಾತರಾಗಿದ್ದ ಧೋನಿ ಚಹಾಲ್ ಮೇಲೆ ಸಿಟ್ಟಾಗಿದ್ದೇಕೆ?

ಟೀಂ ಇಂಡಿಯಾದ ಕೂಲ್ ಕ್ಯಾಪ್ಟನ್ ಎಂದೇ ಖ್ಯಾತರಾಗಿದ್ದ ಮಾಜಿ ನಾಯಕ ಎಂಎಸ್ ಧೋನಿ ಸ್ಪಿನ್ನರ್ ಯಜುವೇಂದ್ರ ಚಹಾಲ್ ವಿರುದ್ಧ ಸಿಟ್ಟಾಗಿದ್ದೇಕೆ ಎಂಬ ಪ್ರಶ್ನೆ ಮೂಡುತ್ತದೆ...

ಟೀಂ ಇಂಡಿಯಾದ ಕೂಲ್ ಕ್ಯಾಪ್ಟನ್ ಎಂದೇ ಖ್ಯಾತರಾಗಿದ್ದ ಮಾಜಿ ನಾಯಕ ಎಂಎಸ್ ಧೋನಿ ಸ್ಪಿನ್ನರ್ ಯಜುವೇಂದ್ರ ಚಹಾಲ್ ವಿರುದ್ಧ ಸಿಟ್ಟಾಗಿದ್ದೇಕೆ ಎಂಬ ಪ್ರಶ್ನೆ ಮೂಡುತ್ತದೆ. 
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯ ಅಂತಿಮ ಹಾಗೂ ನಿರ್ಣಾಯಕ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಟೀಂ ಇಂಡಿಯಾ 75 ರನ್ ಗಳ ಭರ್ಜರಿ ಜಯ ಗಳಿಸಿದೆ. 
ಈ ಪಂದ್ಯದಲ್ಲಿ ಸ್ಪಿನ್ನರ್ ಚಹಾಲ್ ಮೇಲೆ ಮೈದಾನದಲ್ಲಿ ಧೋನಿ ಸಿಟ್ಟಾಗಿದ್ದೇಕೆ ಎಂಬ ಪ್ರಶ್ನೆ ಮೂಡುತ್ತದೆ. ಕಾರಣ ಇಂಗ್ಲೆಂಡ್ ಪರ ಆಟಗಾರ ಬಿಲ್ಲಿಂಗ್ಸ್ ರನ್ನು ಔಟ್ ಮಾಡಿದ ನಂತರದ ಬಾಲ್ ನಲ್ಲಿ ಚಹಾಲ್ ರನ್ ಔಟ್ ಮಾಡುವ ಸದಾವಕಾಶ ಒದಗಿ ಬಂದಿತ್ತು. ಆದರೆ ಚಹಾಲ್ ಅದನ್ನು ಕೈಚೆಲ್ಲಿದ್ದರು.
ಬಿಲ್ಲಿಂಗ್ಸ್ ಪತನದ ನಂತರ ಬಂದ ಜೋ ರೂಟ್ ಚಹಾಲ್ ಎಸೆತವನ್ನು ಮಿಡ್ ಸೈಡ್ ನಲ್ಲಿ ಹೊಡೆದರು ಈ ವೇಳೆ ವಿರಾಟ್ ಕೊಹ್ಲಿ ಡೈ ಮಾಡಿ ಚೆಂಡನ್ನು ನೇರವಾಗಿ ಚಹಾಲ್ ಕೈಗೆ ನೀಡಿದರು. ಈ ವೇಳೆ ನಾನ್ ಸ್ಟ್ರೈಕ್ ನಲ್ಲಿದ್ದ ಆಟಗಾರ ರೂಸ್ ಕ್ರಿಸ್ ಬಿಟ್ಟು ಸ್ಟ್ರೈಕ್ ಕಡೆ ಓಡಿದ್ದ ಆದರೆ ಜೋ ರೂಟ್ ಮಾತ್ರ ಕ್ರಿಸ್ ಬಿಟ್ಟಿರಲಿಲ್ಲ. ಹೀಗಾಗಿ ನಾನ್ ಸ್ಟ್ರೈಕ್ ನಲ್ಲಿ ಚಹಾಲ್ ಸುಲಭವಾಗಿ ರನ್ ಔಟ್ ಮಾಡುವ ಅವಕಾಶವಿತ್ತು. ಆದರೆ ಗಲಿಬಿಲಿಯಲ್ಲಿ ಚಹಾಲ್ ಚೆಂಡನ್ನು ನೇರವಾಗಿ ಧೋನಿಗೆ ಕೈಗೆ ಎಸೆದಿದ್ದರು. ಈ ವೇಳೆ ಧೋನಿ ಚಹಾಲ್ ವಿರುದ್ಧ ಗರಂ ಆದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಾಳೆ CJPಯ ತಿರಂಗಾ ಮೆರವಣಿಗೆ ನಡೆಯಬೇಕಿದ್ದ ದೆಹಲಿಯ ಸೆಂಟ್ರಲ್ ಪಾರ್ಕ್ ಅನ್ನು 2 ದಿನ ಮುಚ್ಚಿದ NDMC!

ಕನ್ನಡಿಗರು ಕೊಟ್ಟ ದುಡ್ಡಲ್ಲೇ AR Rahman ತಮ್ಮ ಮೊದಲ ಸ್ಟುಡಿಯೋ ಕಟ್ಟಿದ್ದು: ನಟ ಯಶ್

ದೇಶಕ್ಕೆ ಹೇಗೆ ಬೆಂಕಿ ಹಚ್ಚಬೇಕು ಎಂಬುದನ್ನು ಬಾಂಗ್ಲಾದೇಶ ನಮಗೆ ತೋರಿಸಿಕೊಟ್ಟಿದೆ: ನೇಹಾ ಬೋರಾ ಹೇಳಿಕೆಗೆ ಬಿಜೆಪಿ ಆಕ್ರೋಶ!

Ramayana: 'ರಾಮಾಯಣ'ದ ರನ್ ಟೈಮ್ ಮೂರು ಗಂಟೆಗೂ ಹೆಚ್ಚು; ಅಮೆರಿಕದಲ್ಲಿ 'PG-13' ರೇಟಿಂಗ್!

ದೆಹಲಿಯ ರಾಮಲೀಲಾದಲ್ಲಿ ಈ ಬಾರಿ ರಾವಣನ ಜೊತೆಗೆ 30 ಅಡಿ ಎತ್ತರದ ಕಾಕ್ರೋಚ್ ಪ್ರತಿಕೃತಿ ದಹನ!