ಮೆಲ್ಬೋರ್ನ್: ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿಯನ್ನು ಕಿಚಾಯಿಸಬೇಡಿ ಎಂದು ಆಸ್ಟ್ರೇಲಿಯಾ ನಾಯಕ ಸ್ಟೀವ್ ಸ್ಮಿತ್ ಮತ್ತು ತಂಡಕ್ಕೆ ಮಾಜಿ ಬ್ಯಾಟ್ಸ್ ಮನ್ ಮೈಕಲ್ ಹಸ್ಸಿ ಎಚ್ಚರಿಕೆ ನೀಡಿದ್ದಾರೆ.
ಫೆಬ್ರವರಿ 23ರಿಂದ ಭಾರತ ನೆಲದಲ್ಲಿ ಟೆಸ್ಟ್ ಸರಣಿಯನ್ನು ಆಡಲಿದ್ದು ಸ್ಫೋಟಕ ಬ್ಯಾಟ್ಸ್ ಮನ್ ವಿರಾಟ್ ಕೊಹ್ಲಿಯನ್ನು ಕಿಚಾಯಿಸುವ ಮೂಲಕ ಅವರನ್ನು ಎದುರು ಹಾಕಿಕೊಳ್ಳಬೇಡಿ ಎಂಬ ಎಚ್ಚರಿಕೆಯ ಮಾತುಗಳನ್ನು ಹೇಳಿದ್ದಾರೆ.
ಕೊಹ್ಲಿ ಆಸ್ಟ್ರೇಲಿಯಾದ ನಂಬರ್ ಒನ್ ಶತ್ರು, ಹೀಗಾಗಿ ಅವರನ್ನು ಅಲ್ಪ ಮೊತ್ತಕ್ಕೆ ಔಟ್ ಮಾಡಬೇಕು. ಒಂದು ವೇಳೆ ಅವರನ್ನು ಕಿಚಾಯಿಸಿದರೇ ಕೊಹ್ಲಿ ಅಕ್ರಮಣಕಾರಿಯಾಗಿ ಬ್ಯಾಟ್ ಮಾಡುತ್ತಾರೆ ಅದನ್ನು ನಾವು ತಡೆದುಕೊಳ್ಳಲು ಸಾಧ್ಯವಿಲ್ಲ. ಅವರೊಬ್ಬ ನಿಜವಾದ ಸ್ಪರ್ಧಿ ಎಂದು ಹೇಳಿದ್ದಾರೆ.
ಆಸ್ಟ್ರೇಲಿಯಾ ಪರ 79 ಟೆಸ್ಟ್ ಪಂದ್ಯಗಳನ್ನು ಆಡಿರುವ ಮೈಕಲ್ ಹಸ್ಸಿ 6235 ರನ್ ಗಳನ್ನು ಸಿಡಿಸಿದ್ದಾರೆ. 2013ರ ಬಳಿಕ ಅವರು ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ್ದರು.