ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರಿಕೆಟ್

3ನೇ ಅಂಪೈರ್ ನಾಟ್ಔಟ್ ತೀರ್ಪು ಬಳಿಕ ಡಿಆರ್ಎಸ್ ಅಪೀಲ್ ಮಾಡಿ ಗೆದ್ದ ವಿರಾಟ್

ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಚಾಣಾಕ್ಷ ಎಂಬುದಕ್ಕೆ ಮತ್ತೊಂದು ಸಾಕ್ಷಿ ಇಲ್ಲಿದೆ. ಬಾಂಗ್ಲಾದೇಶ ವಿರುದ್ಧ ಟೆಸ್ಟ್ ಪಂದ್ಯದಲ್ಲಿ 3ನೇ ಅಂಪೈರ್...

ವಿರಾಟ್ ಕೊಹ್ಲಿ
Vishwanath S
Updated On : 14 Feb 2017, 1:30 am
ಹೈದರಾಬಾದ್: ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಚಾಣಾಕ್ಷ ಎಂಬುದಕ್ಕೆ ಮತ್ತೊಂದು ಸಾಕ್ಷಿ ಇಲ್ಲಿದೆ. ಬಾಂಗ್ಲಾದೇಶ ವಿರುದ್ಧ ಟೆಸ್ಟ್ ಪಂದ್ಯದಲ್ಲಿ 3ನೇ ಅಂಪೈರ್ ನಾಟ್ಔಟ್ ತೀರ್ಪು ಬಳಿಕ ಡಿಆರ್ಎಸ್ ಗೆ ಅಪೀಲ್ ಮಾಡಿ ಅದರಲ್ಲೂ ಯಶಸ್ವಿಯಾಗಿದ್ದಾರೆ. 
ಬಾಂಗ್ಲಾದೇಶದ ವಿರುದ್ಧದ ಟೆಸ್ಟ್ ಪಂದ್ಯ ಹೈದರಾಬಾದ್ ನ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ನಡೆದಿದ್ದು 9 ವಿಕೆಟ್ ಕಳೆದುಕೊಂಡಿದ್ದ ಬಾಂಗ್ಲಾದೇಶ ಸೋಲಿನ ಸುಳಿಯಲ್ಲಿತ್ತು. ಅಶ್ವಿನ್ ಓವರ್ ನಲ್ಲಿ ಬಾಂಗ್ಲಾದ ಹನ್ನೊಂದನೆ ಆಟಗಾರ ಟಸ್ಕಿನ್ ಅಹ್ಮದ್ ಎದುರಿಸಿದ್ದರು. ಈ ವೇಳೆ ಚೆಂಡನ್ನು ಕ್ಯಾಚ್ ಪಡೆಯಲಾಗಿತ್ತು. 
ಕೂಡಲೇ ಟೀಂ ಇಂಡಿಯಾ ಆಟಗಾರರು ಕ್ಯಾಚ್ ಔಟ್ ಗೆ ಫೀಲ್ಡ್ ಅಂಪೈರ್ ಗೆ ಮನವಿ ಮಾಡಿದರು. ಫೀಲ್ಡ್ ಅಂಪೈರ್ ಗಳು ಮೂರನೇ ಅಂಪೈರ್ಗೆ ಮನವಿ ಮಾಡಿದರು. ಇದನ್ನು ಪರಿಶೀಲಿಸಿದ ಮೂರನೇ ಅಂಪೈರ್ ಬ್ಯಾಟ್ ಗೆ ಬಾಲ್ ತಗುಲದ್ದರಿಂದ ನಾಟ್ಔಟ್ ಎಂದು ತೀರ್ಪು ನೀಡಿದರು. 

Advertisement

Advertisement

ಪರಿಶೀಲನೆ ವೇಳೆ ಎಲೆಕ್ಟ್ರಾನಿಕ್ ಬೋರ್ಡ್ ನಲ್ಲಿ ಕ್ಯಾಚ್ ಔಟ್ ಬದಲಿಗೆ ಎಲ್ ಬಿ ಔಟ್ ಆಗಿರುವುದು ಎಲ್ಲರಿಗೂ ಖಚಿತವಾಗಿತ್ತು. ಇದನ್ನು ಅರಿತ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಡಿಆರ್ಎಸ್ ಮೂಲಕ ಎಲ್ಬಿಗೆ ಮನವಿ ಮಾಡಿದರು. ಎಲ್ಬಿ ಮನವಿ ಸ್ವೀಕರಿಸಿದ ಮೂರನೇ ಅಂಪೈರ್ ಔಟ್ ಎಂದು ಘೋಷಿಸಿದರು. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments